Thursday, December 11, 2025

ಶಸ್ತ್ರಾಸ್ತ್ರ ತ್ಯಜಿಸಿ 82 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ 11 ನಕ್ಸಲೀಯರ ಶರಣಾಗತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ 82 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದ 11 ಹಿರಿಯ ನಕ್ಸಲೀಯರು ಪೊಲೀಸರಿಗೆ ಶರಣಾಗಿದ್ದಾರೆ.

ಸುಕ್ಮಾ ಪೊಲೀಸ್ ಮಹಾನಿರ್ದೇಶಕ ರಶ್ಮಿ ಶುಕ್ಲಾ ಅವರ ಮುಂದೆ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದಾಗ ಅವರಲ್ಲಿ ನಾಲ್ವರು ಸಮವಸ್ತ್ರದಲ್ಲಿದ್ದರು. ರಾಜ್ಯ ಸರ್ಕಾರವು ಅವರಿಗೆ 82 ಲಕ್ಷ ರೂ. ಬಹುಮಾನವನ್ನು ಘೋಷಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಸಂಖ್ಯೆಯ ನಕ್ಸಲೀಯರು ಪೊಳ್ಳು ನಕ್ಸಲ್ ಸಿದ್ಧಾಂತದಿಂದ ಭ್ರಮನಿರಸನಗೊಂಡಿದ್ದು, ಜನರ ವಿರುದ್ಧ ಬುದ್ದಿಹೀನ ಹಿಂಸಾಚಾರದಿಂದ ಹತಾಶೆಗೊಂಡಿದ್ದಾರೆ. 2005 ರಿಂದ ಮಹಾರಾಷ್ಟ್ರ ಸರ್ಕಾರ ಜಾರಿಗೊಳಿಸಿದ ಶರಣಾಗತಿ ಮತ್ತು ಪುನರ್ವಸತಿ ನೀತಿಗೆ ಆಕರ್ಷಿತರಾಗಿದ್ದಾರೆ ಎಂದು ಹೇಳಲಾಗಿದೆ.

ಗಡ್ಚಿರೋಲಿ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಸಂಘಟಿತ ಪ್ರಯತ್ನದಿಂದಾಗಿ ಜಿಲ್ಲೆಯಲ್ಲಿ ಈ ವರ್ಷ 112 ನಕ್ಸಲೀಯರು ಶರಣಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!