January14, 2026
Wednesday, January 14, 2026
spot_img

ಅನ್ನ ತಿನ್ನೋರಿಗೆ ಈ ರೋಗಗಳ ಅಪಾಯ ಹೆಚ್ಚಂತೆ! ಇದಕ್ಕೆ ನೀವೇನಂತೀರಾ?

ದಕ್ಷಿಣ ಭಾರತದಲ್ಲಿ ನಮ್ಮ ನಿಮ್ಮೆಲ್ಲರ ದಿನಚರಿ ಆರಂಭವಾಗೋದು ಅನ್ನದ ಒಂದು ತುತ್ತು ತಿಂದಮೇಲೆನೇ ಅಂತ ಹೇಳಿದ್ರು ತಪ್ಪಾಗಲ್ಲ. ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೆ ಅಕ್ಕಿಯನ್ನು ಬಳಸುವ ಅಭ್ಯಾಸ ನಮ್ಮಲ್ಲಿರುವುದು ಸಾಮಾನ್ಯ. ಆದರೆ ಅಕ್ಕಿಯ ಸೇವನೆಯು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದೆಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ.

ಅಕ್ಕಿ ಸೇವನೆ ಆರೋಗ್ಯಕರವಾಗಿರಲು ಸಾಧ್ಯವಾದರೂ, ಮುಖ್ಯವಾಗಿ ಹೆಚ್ಚು ಪಾಲಿಶ್ ಮಾಡಿದ ಬಿಳಿ ಅಕ್ಕಿ white rice ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳಿದ್ದು, ಪೋಷಕಾಂಶಗಳು ಶೂನ್ಯವಾಗಿರುತ್ತವೆ. ಇದರ ಪರಿಣಾಮವಾಗಿ ತೂಕ ಹೆಚ್ಚಳ, ಟೈಪ್ 2 ಮಧುಮೇಹ, ಕೊಲೆಸ್ಟ್ರಾಲ್ ಏರಿಕೆ, ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆ ಹೆಚ್ಚಾಗುತ್ತದೆ.

ಪೋಷಕಾಂಶಗಳ ಕೊರತೆಯೇ ಸಮಸ್ಯೆಯ ಮೂಲ. ಪಾಲಿಶ್ ಪ್ರಕ್ರಿಯೆಯಿಂದ ಅಕ್ಕಿಯಲ್ಲಿನ ನೈಸರ್ಗಿಕ ಫೈಬರ್, ವಿಟಮಿನ್ ಬಿ, ಮತ್ತು ಪ್ರೋಟೀನ್‌ಗಳು ನಾಶವಾಗುತ್ತವೆ. ಇದರಿಂದಾಗಿ ದೀರ್ಘಾವಧಿಯಲ್ಲಿ ಜೀರ್ಣಕೋಶ ಸಮಸ್ಯೆ, ಹೀಮೋಗ್ಲೋಬಿನ್ ಮಟ್ಟ ಕುಸಿತ, ಮತ್ತು ಇಮ್ಮ್ಯೂನ್ ಶಕ್ತಿ ಕಡಿಮೆಯಾಗಬಹುದು.

ಈ ಕುರಿತು ವೈದ್ಯಕೀಯ ತಜ್ಞರು ನೀಡುತ್ತಿರುವ ಸಲಹೆ ಏನೆಂದರೆ, ಪ್ರತಿದಿನ ಬಿಳಿ ಅಕ್ಕಿಯ ಸೇವನೆಗೆ ಬದಲಿ ಆಯ್ಕೆಯಾಗಿ ಬ್ರೌನ್ ರೈಸ್ ಅಥವಾ ಗೋಧಿ ಅಥವಾ ಜೋಳದ ತಿನಿಸುಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಜೊತೆಗೆ, ಅಕ್ಕಿ ಸೇವನೆ ಮಾಡಿದಾಗ ಅದರೊಂದಿಗೆ ಹೆಚ್ಚು ತರಕಾರಿ ಅಥವಾ ಪ್ರೋಟೀನ್ ಮೂಲಗಳನ್ನು ಸೇರಿಸಿಕೊಳ್ಳುವುದು ಉತ್ತಮ.

ಆಹಾರ ನಂಬಿಕೆಯಲ್ಲಿ ಬದಲಾವಣೆ ತರಲು ಇದು ಸಕಾಲ. ಆರೋಗ್ಯದ ದೃಷ್ಟಿಯಿಂದ ವ್ಯಾಯಾಮದ ಜೊತೆಗೆ, ಆಹಾರದ ಪ್ರಮಾಣ ಮತ್ತು ಗುಣಮಟ್ಟಕ್ಕೆ ಗಮನ ನೀಡುವುದು ಅಗತ್ಯ. ಒಂದು ಆಯ್ಕೆ ಉತ್ತಮ ಆರೋಗ್ಯದ ಕಡೆಗೆ ದಾರಿ ತೋರಬಹುದು.

Most Read

error: Content is protected !!