ಅಪ್ಪ ನಿಮಗಿದು ನಮ್ಮ ಸೆಲ್ಯೂಟ್‌: ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಗೆ ಕಣ್ಣೀರ ವಿದಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಮ್ಮು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕೋಕರ್‌ನಾಗ್‌ನಲ್ಲಿ ಭಯೋತ್ಪಾದಕ ಜೊತೆಗಿನ ಎನ್‌ಕೌಂಟ್‌ ನಲ್ಲಿ ಭಯೋತ್ಪಾದಕರ ಗುಂಡೇಟಿಗೆ 19 ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಸಾವು ಕಂಡಿದ್ದರು.

ಅವರೊಂದಿಗೆ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಹಾಗೂ ಜಮ್ಮು ಕಾಶ್ಮೀರ ಪೊಲೀಸ್‌ ಡಿವೈಎಸ್‌ಪಿ ಹಿಮಾಯೂನ್‌ ಮುಜಾಮಿಲ್‌ ಭಟ್‌ ಕೂಡ ಸಾವು ಕಂಡಿದ್ದರು. ಶುಕ್ರವಾರ ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರ ಪಂಜಾಬ್‌ನ ಅವರ ಸ್ವಗ್ರಾಮಕ್ಕೆ ಬಂದಾಗ ಇಡೀ ಪ್ರದೇಶ ಭಾವುಕವಾಗಿತ್ತು.

ಆ ಕ್ಷಣ ಆರು ವರ್ಷದ ಹುಡುಗನಿಗೆ ತನ್ನ ತಂದೆಯನ್ನು ಬಾಕ್ಸ್‌ನಲ್ಲಿ ಯಾಕೆ ಇಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ, ಸೇನಾ ಸಮವಸ್ತ್ರದಲ್ಲಿದ್ದ ಆ ಹುಡುಗ ತಂದೆಯ ಶವಪೆಟ್ಟಿಗೆಗೆ ಕೊನೆಯ ಬಾರಿಗೆ ತನಗೆ ಗೊತ್ತಿರುವ ರೀತಿಯಲ್ಲಿ ಸೆಲ್ಯೂಟ್‌ ಹೊಡೆದಾಗ ಅಲ್ಲಿದ್ದವರ ಕಣ್ಣಾಲಿಗಳು ತೇವವಾಗಿದ್ದವು.

ಸೇನಾ ಸಮವಸ್ತ್ರದಲ್ಲಿಯೇ ನಿಂತಿದ್ದ ಅವರ ಆರು ವರ್ಷದ ಪುತ್ರ ಹಾಗೂ ಎರಡು ವರ್ಷದ ಆತನ ತಂಗಿ ಸೆಲ್ಯೂಟ್‌ ಹೊಡೆದು ತಂದೆಗೆ ಬೀಳ್ಕೊಟ್ಟರು.

ಈ ವೇಳೆ ಇಡೀ ಪ್ರದೇಶವೇ ಮೌನಕ್ಕೆ ಶರಣಾಗಿತ್ತು. ಮನ್‌ಪ್ರೀತ್‌ ಸಿಂಗ್‌ ಅವರ ಪತ್ನಿ ಜಗ್‌ಮೀತ್‌ ಕೌರ್‌, ಅವರ ತಾಯಿ ಹಾಗೂ ಕುಟುಂಬದ ಇತರರನ್ನು ಸಮಾಧಾನ ಮಾಡುವುದೇ ಕಷ್ಟವಾಗಿತ್ತು. ಕಣ್ಣೀರಿಡುತ್ತಲೇ ಮನ್‌ಪ್ರೀತ್‌ ಸಿಂಗ್‌ ಅವರನ್ನು ಬೀಳ್ಕೊಟ್ಟರು.

41 ವರ್ಷದ ಮನ್‌ಪ್ರೀತ್‌ ಸಿಂಗ್‌, 19 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್‌ ಆಫೀಸರ್‌ ಆಗಿ ಎನ್‌ಕೌಂಟರ್‌ಅನ್ನು ಮುನ್ನಡೆಸಿದ್ದರು. ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತರಾಗಿದ್ದ ಇವರು, ಬುಧವಾರ ರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದರು.

ಮನ್‌ಪ್ರೀತ್‌ ಸಿಂಗ್‌ ಅವರ ಜೊತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೇಜರ್‌ ಆಶೀಶ್‌ ಧೋನ್‌ಚಾಕ್‌ ಅವರ ಮೃತದೇಹವನ್ನು ಪಾಣಿಪತ್‌ನ ಸ್ವಗ್ರಾಮಕ್ಕೆ ತರಲಾಗಿದೆ. ಈ ವೇಳೆ ಅವರ ಅಂತಿಮಯಾತ್ರಗೆ ಸ್ಥಳೀ ಸೇನಾಧಿಕಾರಿಗಳು ಹಾಗೂ ಕುಟುಂಬದವರು ಭಾಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ ಪಾಣಿಪತ್‌ನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ತರಲಾಗಿತ್ತು. ಬಳಿಕ ಸೇನಾ ವಾಹನದಲ್ಲಿಯೇ ಪಾರ್ಥೀವವನ್ನು ಬಿಂಝೋಲ್‌ ಗ್ರಾಮಕ್ಕೆ ತರಲಾಗಿತ್ತು. ಬಳಿಕ ಗನ್‌ ಸೆಲ್ಯೂಟ್‌ ನೀಡಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!