Saturday, December 20, 2025

ಇದೆಂಥಾ ದುರಾದೃಷ್ಟ: ಬಸ್‌ ಬಾರದೇ ಹಾಲಿನ ಗಾಡಿ ಹತ್ತಿದ ಮಕ್ಕಳು! ವಾಹನ ಪಲ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಬಸ್ ಬಾರದ ಹಿನ್ನೆಲೆ ಹತ್ತಿದ್ದ ಹಾಲಿನ ವಾಹನ ಪಲ್ಟಿಯಾದ ಪರಿಣಾಮ 7 ಮಂದಿ ಗಾಯವಾಗಿರುವ ಘಟನೆ ಮೈಸೂರಿನ ಹುಣಸೂರು ತಾಲೂಕು ಸೋಮನಹಳ್ಳಿ ಬಳಿ ನಡೆದಿದೆ.

ಹುಣಸೂರು ಬನ್ನಿಕುಪ್ಪೆ ಫ್ರೌಢಶಾಲೆಯ ತೆರಳುತ್ತಿದ್ದ ಮೂಕನಹಳ್ಳಿ ಗ್ರಾಮದ ಪಾಲಾಕ್ಷ, ವಿದ್ಯಾಚರಣ, ಅಪ್ಪು, ನಿತಿನ್, ಚಂದ್ರಶೇಖರ್, ಮನುಕುಮಾರ್, ಎಮ್ಮೆಕೊಪ್ಪಲಿನ ಸಂಜಯ್ ಗಾಯಗೊಂಡ ವಿದ್ಯಾರ್ಥಿಗಳು.

ಗಾಯಳುಗಳನ್ನು ಸ್ಥಳೀಯ ಆಸ್ಪಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಬಸ್ ಬಾರದ ಹಿನ್ನೆಲೆ ಹತ್ತಿದ್ದ ಹಾಲಿನ ವಾಹನ ಪಲ್ಟಿಯಾದ ಪರಿಣಾಮ 7 ಮಂದಿ ಗಾಯವಾಗಿರುವ ಘಟನೆ ಮೈಸೂರಿನ ಹುಣಸೂರು ತಾಲೂಕು ಸೋಮನಹಳ್ಳಿ ಬಳಿ ನಡೆದಿದೆ.ತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿ ಪಾಲಾಕ್ಷಗೆ ಗಂಭೀರ ಗಾಯವಾಗಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ಬಸ್ ಬಾರದ ಹಿನ್ನೆಲೆ ಅದೇ ಮಾರ್ಗದಲ್ಲಿ ಬಂದ ಹಾಲಿನ ವಾಹನಕ್ಕೆ ಹತ್ತಿದ್ದರು. ಈ ಹಾಲಿನ ವಾಹನವು ಮೈಸೂರು ಹುಣಸೂರು ಹೆದ್ದಾರಿಯ ಸೋಮನಹಳ್ಳಿ ಬಳಿ ಪಲ್ಟಿಯಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!