August 16, 2026
Sunday, August 16, 2026
spot_img

‘ಸುಪ್ರೀಂ’ ಆದೇಶಕ್ಕೆ ಡೋಂಟ್ ಕೇರ್…ಜಾಗತಿಕ ಸುಂಕ ಶೇ.10 ರಿಂದ 15%ಕ್ಕೆ ಹೆಚ್ಚಿಸಿದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಸುಪ್ರೀಂ ಕೋರ್ಟ್ ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಸುಂಕಗಳನ್ನು ರದ್ದುಗೊಳಿಸಿದರೂ ಕೂಡ ಅಮೆರಿಕದ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡಾ 10ರಷ್ಟು ಹೊಸ ಜಾಗತಿಕ ಶುಲ್ಕವನ್ನು ಹೇರಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಶೇಕಡಾ 15ಕ್ಕೆ ಹೆಚ್ಚಿಸಿ ಘೋಷಣೆ ಮಾಡಿದ್ದಾರೆ.

ಅಮೆರಿಕದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ಕಾನೂನುಬದ್ಧವಾಗಿ ಅನುಮತಿಸಬಹುದಾದ ಸುಂಕಗಳನ್ನು ತಮ್ಮ ಆಡಳಿತ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಈ ಕುರಿತು ಟ್ರುತ್ ಸೋಶಿಯಲ್‌ನಲ್ಲಿನ ಪೋಸ್ಟ್‌ ಹಾಕಿ ಟ್ರಂಪ್, ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಹೊರಡಿಸಿದ ಸುಂಕಗಳ ಮೇಲಿನ ನಿರ್ಧಾರ ಸಂಪೂರ್ಣ ಹಾಸ್ಯಾಸ್ಪದ, ಕಳಪೆಯಾಗಿ ಬರೆಯಲ್ಪತ್ತಿಟ್ಟಿದೆ. ಇದು ಸಂಪೂರ್ಣ ಅಮೇರಿಕನ್ ವಿರೋಧಿ ನಿರ್ಧಾರವಾಗಿದೆ. ಇದೀಗ ನಾನು, ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷನಾಗಿ, ತಕ್ಷಣವೇ ಜಾರಿಗೆ ಬರುವಂತೆ ಜಗತ್ತಿನ ಎಲ್ಲ ದೇಶಗಳ ಮೇಲಿನ ಶೇ. 10ರಷ್ಟು ಸುಂಕವನ್ನು ಕಾನೂನುಬದ್ಧವಾಗಿಯೇ ಶೇ. 15ಕ್ಕೆ ಹೆಚ್ಚಿಸಿದ್ದೇನೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ಘೋಷಣೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !