ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮಿನಿ ಹರಾಜು ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಗರಿಷ್ಠ ಮೊತ್ತಕ್ಕೆ ಮಾರಾಟವಾಗಿದ್ದರೆ.
ಸ್ಟಾರ್ಕ್ ಬರೋಬ್ಬರಿ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡದ ಪಾಲಾಗಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ಗೆ 20.50 ಕೋಟಿ ರೂಪಾಯಿ ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಇದು ಐಪಿಎಲ್ ಇತಿಹಾಸದ ಗರಿಷ್ಠ ಬಿಡ್ಡಿಂಗ್ ಎಂಬ ಹೆಗ್ಗಳಿಕೆಗ ಪಾತ್ರವಾಗಿತ್ತು. ಆದರೆ ಕೆಲವೇ ಹೊತ್ತಲ್ಲಿ ಮಿಚೆಲ್ ಸ್ಟಾರ್ಕ್ ಬಿರುಗಾಳಿಯಂತೆ ಎಲ್ಲಾ ದಾಖಲೆ ದೂಳೀಪಟ ಮಾಡಿದ್ದಾರೆ.
ಮಿಚೆಲ್ ಸ್ಟಾರ್ಕ್ ಖರೀದಿಗೆ ಲಖನೌ ಸೂಪರ್ ಜೈಟ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವೆ ಬಾರಿ ಪೈಪೋಟಿ ಎರ್ಪಟ್ಟಿತ್ತು. ಜಿದ್ದಾ ಜಿದ್ದಿನಿಂದ ಕೂಡಿದ ಬಿಡ್ಡಿಂಗ್ನಲ್ಲಿ 20 ಕೋಟಿ ರೂಪಾಯಿ ದಾಡುತ್ತಿದ್ದಂತೆ ಲಖನೌ ಹಾಗೂ ಕೆಕೆಆರ್ ತಂಡಗಳು ಮಾತ್ರ ಬಿಡ್ಡಿಂಗ್ ಮುಂದುವರಿಸಿತು. ಇತರ ತಂಡಗಳು ಬಿಡ್ಡಿಂಗ್ನಿಂದ ಹಿಂದೆ ಸರಿಯಿತು. ಇತ್ತ ಆರ್ಸಿಬಿ ಅಲ್ಜಾರಿ ಜೋಸೆಫ್ ಖರೀದಿಸಿದ ಕಾರಣ ಪರ್ಸ್ ಬಹುತೇಕ ಖಾಲಿಯಾಗಿತ್ತು. ಹೀಗಾಗಿ ಸ್ಟಾರ್ಕ್ ಬಿಡ್ಡಿಂಗ್ನಲ್ಲಿ ಆರ್ಸಿಬಿ ಆರಂಬಿಕ ಹಂದಲ್ಲೇ ಹಿಂದೆ ಸರಿಯಿತು.
ಕೆಕೆಆರ್ ಹಾಗೂ ಲಖನೋ ಜಿದ್ದಿಗೆ ಬಿದ್ದು ಪೈಪೋಟಿ ನಡೆಸಿತು. ಕೊನೆಗೆ ಕೆಕೆಆರ್ 24.75 ಕೋಟಿ ರೂಪಾಯಿಗೆ ಸ್ಟಾರ್ಕ್ ಖರೀದಿಸಿತು. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.