ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಚಿತ್ರದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಬಳಸಿಕೊಂಡಿದ್ದ ಕೋಣಗಳಿಗೆ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಪದಕ ದಕ್ಕಿದೆ.
ಬೆಂಗಳೂರಿನ ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ‘ಬೆಂಗಳೂರು ಕಂಬಳ’ ಕ್ರೀಡೆಯಲ್ಲಿ ಕಾಂತಾರ ದಲ್ಲಿ ( ರಿಷಬ್ ಶೆಟ್ಟಿ) ಓಡಿಸಿದ್ದ ಅಪ್ಪು-ಕಿಟ್ಟಿ ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಪಡೆದುಕೊಂಡಿದೆ.
ಉಡುಪಿ ಜಿಲ್ಲೆಯ ಬೈಂದೂರಿನ ಪರಮೇಶ್ವರ್ ಭಟ್ ಅವರ ಅಪ್ಪು ಮತ್ತು ಕಿಟ್ಟಿ ಕೋಣಗಳು ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿದ್ದವು.
ಇಂದು 6.5 ಅಡಿ ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪದಕ (Gold Medal) ಪಡೆದಿವೆ. ಬಾನೆತ್ತರಕ್ಕೆ ನೀರು ಚಿಮ್ಮಿಸುತ್ತಾ ಈ ಕೋಣಗಳ ಓಟ ನೋಡುಗರ ಮೈನವಿರೇಳಿಸುವಂತಿತ್ತು.