Tuesday, October 7, 2025

ಕಾಡಲ್ಲಲ್ಲ, ಮನೆಯಲ್ಲೇ ಅಡಗಿ ಕುಳಿತ ಚಿರತೆ: ದಿಕ್ಕಾಪಾಲಾಗಿ ಓಡಿದ ಜನ

ಹೊಸದಿಗಂತ ವರದಿ ರಾಣೇಬೆನ್ನೂರು:

ಚಿರತೆಗಳು ಸಾಮಾನ್ಯವಾಗಿ ಕಾಡಿನಲ್ಲಿ ಹಾಗೂ ಕಾಡಿನ ಆಜು ಬಾಜು ರಸ್ತೆಯ ಬಳಿ ಕಂಡು ಬರುತ್ತವೆ ಆದರೆ ರಾಣೇಬೆನ್ನೂರ ನಗರದ ನಾಡಿಗೇರ ಓಣಿಯಲ್ಲಿ ಪಿ ಟಿ ಕಾಕಿ ಎಂಬುವರ ಮನೆಯಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ಚಿರತೆ ಪ್ರತ್ಯಕ್ಷವಾಗಿದೆ.

ಚಿರತೆಯನ್ನು ಕಂಡ ಮನೆಯವರು ಭಯಭೀತರಾಗಿ ಮನೆಯಿಂದ ಎಲ್ಲರೂ ಹೊರಗೆ ಬಂದಿದ್ದಾರೆ ನಂತರ ಚಿರತೆ ಮನೆಯನ್ನು ಬಿಟ್ಟು ಮತ್ತೆ ಕುರುಬಗೇರಿ ಓಣಿಯಲ್ಲಿ ನುಗ್ಗಿದೆ ಇದನ್ನು ಕಂಡ ಸಾರ್ವಜನಿಕರು ಕೂಡಲೇ ಅರಣ್ಯ ಇಲಾಖೆಯ‌ ಅಧಿಕಾರಿಗಳಿಗೆ ಮಾಹಿತಿ ನೀಡಿ ಚಿರತೆ ಹಿಡಿಯುವಂತೆ ಮನವಿ ಮಾಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂಧಿಗಳು ಚಿರತೆ ಹಿಡಿಯಲು ಮುಂದಾಗಿದ್ದಾರೆ.

error: Content is protected !!