Saturday, November 1, 2025

ಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌ ಇದ್ದಂತೆ: ಸಿಎಂ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚುನಾವಣಾ ಆಯೋಗ ಬಿಜೆಪಿಯ ಬ್ರ‍್ಯಾಂಚ್ ಆಫೀಸ್. ಬಿಜೆಪಿಯ ಮಾತನ್ನು ಕೇಳುವವರೇ ಆಯೋಗದಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ರಾಹುಲ್ ಗಾಂಧಿ ಈ ವಿಚಾರ ಇಟ್ಟುಕೊಂಡು ಹೋರಾಟ ಮಾಡ್ತಾರೆ. ಬಿಜೆಪಿ ಸದಾ ಅಧಿಕಾರ ಬಯಸುವ ಪಕ್ಷ. ತನಿಖಾ ಸಂಸ್ಥೆಗಳ ಒಬಿಸಿ, ದಲಿತರನ್ನು ಹೆದರಿಸಿ ಬೆದರಿಸಿ ಅಧಿಕಾರ ಪಡೆಯುತ್ತಿದೆ ಎಂದು ದೂರಿದರು.

ಸಂವಿಧಾನ ಉಳಿಯಲು ಇವರು ಮುಂದುವರೆಯಬಾರದು. ಸಂವಿಧಾನದ ರಕ್ಷಣೆಯಲ್ಲಿ ನಮ್ಮೆಲ್ಲರ ರಕ್ಷಣೆ ಇದೆ. ಅಸಮಾನತೆಯನ್ನು ತಡೆದು ಹಾಕುವರೆಗೂ ದೇಶದಲ್ಲಿ ಶಾಂತಿ, ನ್ಯಾಯ, ನೆಮ್ಮದಿ ನೆಲೆಸಲ್ಲ. ಸಾಮಾಜಿಕ ನ್ಯಾಯದಲ್ಲಿ, ಭಾತೃತ್ವದಲ್ಲಿ, ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇರುವರು ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಇರುತ್ತದೆ. ಕಾಂಗ್ರೆಸ್, ರಾಹುಲ್ ಗಾಂಧಿ ಅಧಿಕಾರಕ್ಕೆ ಬಂದರೆ ಮಾತ್ರ ಸಮಾನತೆ ಸಿಗಲು ಸಾಧ್ಯ. ಇಡೀ ದೇಶ ರಾಹುಲ್ ಗಾಂಧಿ ನಾಯಕತ್ವ ಬೇಕು ಎಂದು ಬಯಸುತ್ತಿದೆ ಎಂದು ಸಿಎಂ ಹೇಳಿದರು.

error: Content is protected !!