January14, 2026
Wednesday, January 14, 2026
spot_img

ದಿನಭವಿಷ್ಯ: ಇಡೀ ಕುಟುಂಬದ ಹೊಣೆ ಹೊತ್ತುಕೊಳ್ಳುವಿರಿ, ಇದು ನಿಮಗೆ ಸಾಧ್ಯ ಕೂಡ

ಮೇಷ
ನಿಮ್ಮ ದೈನಂದಿನ ವ್ಯವಹಾರದಲ್ಲಿ ವಾಗ್ವಾದ, ಸಂಘರ್ಷ ನಡೆದೀತು.   ಸಮಚಿತ್ತ ಕಳಕೊಳ್ಳಬೇಡಿ. ಟೀಕೆಗಳನ್ನು ಅಸಡ್ಡೆ ಮಾಡುವುದು ಲೇಸು.
ವೃಷಭ
ಭಾವುಕ ವಿಷಯ ಗಳಲ್ಲಿ ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಮಾನಸಿಕ ನೋವು ತಿನ್ನುವುದು ತಪ್ಪಬಹುದು. ಹಣದ ಕೊರತೆ ಕಾಡಲಿದೆ.
ಮಿಥುನ
ಆತ್ಮೀಯ ಸಂಬಂಧ ಕಾಯ್ದುಕೊಳ್ಳಲು ಕಷ್ಟ ಪಡುವಿರಿ. ಇತರರ  ಭಾವನೆಗೂ ಬೆಲೆ ಕೊಡಿ. ಕೆಲವರ ಬಗೆಗಿನ  ಪೂರ್ವಾಗ್ರಹ ತ್ಯಜಿಸಿರಿ.
ಕಟಕ
ಕೆಲವು ವಿಷಯ ಗಳಲ್ಲಿ ಸಮಸ್ಯೆ ಕಾಡುವುದು. ಅದನ್ನು ಕೂಡಲೇ ಪರಿಹರಿಸಿ. ಆಪ್ತರ ಜತೆಗಿನ ಸಂಬಂಧದಲ್ಲಿ ಬಿರುಕು.
ಸಿಂಹ
ಬಂಧುಗಳ ಜತೆ ಜಗಳವಾದೀತು. ಅವರ ವರ್ತನೆ ನಿಮಗೆ ರೋಷ ಬರಿಸಬಹುದು. ಆರ್ಥಿಕ ಒತ್ತಡ ಹೆಚ್ಚು. ಖರ್ಚು ನಿಯಂತ್ರಿಸಿರಿ.
ಕನ್ಯಾ
ಸಣ್ಣ ವಿಷಯಗಳು ಮನಸ್ಸಿನ ಶಾಂತಿ ಕದಡು ವುದು. ಪರಿಹಾರ ಕಾರ್ಯ ವಿಳಂಬ. ಕಾರ್ಯ ಸಾಧನೆಗೆ ಕೌಟುಂಬಿಕ ಸಹಕಾರ ಅಗತ್ಯ.
ತುಲಾ
ಕುಟುಂಬದ ಎಲ್ಲರ ವ್ಯವಹಾರದ ಹೊಣೆ ನಿಮ್ಮ ಹೆಗಲೇರಿದೆ. ಅದು ಅಸಾಧ್ಯ ಎನಿಸಬಹುದು. ಆಪ್ತರ ಅಸಮಾಧಾನ ಎದುರಿಸುವಿರಿ.
ವೃಶ್ಚಿಕ
ಇತರರ ಕುರಿತಾದ ಅಸೂಯೆಯಿಂದ ಹೊರಬನ್ನಿ. ಅದು ನಿಮ್ಮ ಮನಶ್ಯಾಂತಿ ಹಾಳು ಮಾಡುತ್ತಿದೆ. ನಿಮ್ಮ ಸಾಧನೆಗೆ ಗಮನ ಕೊಡಿ.
ಧನು
ಕೆಲವು ವಿಷಯ
ಸಣ್ಣದೆಂದು ಕಡೆಗಣಿಸಿದರೆ ಕೆಡುವಿರಿ. ಅದು ದೊಡ್ಡ ಪರಿಣಾಮ ಉಂಟು ಮಾಡೀತು. ಕೌಟುಂಬಿಕ ಭಿನ್ನಮತ ಪರಿಹರಿಸಿ.
ಮಕರ
ಬಾಕಿಯುಳಿದ ವ್ಯವಹಾರ ಪೂರ್ಣ ಗೊಳಿಸಿ. ಅದನ್ನು ಹಾಗೇ ಬಿಡಬೇಡಿ. ಸಮಸ್ಯೆ ಪರಿಹರಿಸಲು ಆತ್ಮೀಯರ ನೆರವು. ಕೌಟುಂಬಿಕ ಶಾಂತಿ
ಕುಂಭ
ಉತ್ಸಾಹಭಂಗ ವಾಗುವ ಬೆಳವಣಿಗೆ ಸಂಭವ. ಜಾಣತನದಿಂದ ನಿಭಾಯಿಸಿ. ಸಾಂಸಾರಿಕ ತಾಪತ್ರಯ ಬೇಸರ ತರುವುದು.
ಮೀನ
ಬಿಡುವಿಲ್ಲದ ಕಾರ್ಯದ ಮಧ್ಯೆಯೂ ಕುಟುಂಬದ ಕಡೆ ಗಮನ ಕೊಡಲು ಮರೆಯದಿರಿ. ಸಣ್ಣ ಕೊರಗೊಂದು ಮನಸ್ಸು ಕೆಡಿಸಲಿದೆ.

Most Read

error: Content is protected !!