January14, 2026
Wednesday, January 14, 2026
spot_img

ದಿನಭವಿಷ್ಯ: ಎಷ್ಟೇ ಬ್ಯುಸಿಯಿದ್ದರೂ ಇಂದು ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವಿರಿ, ಎಲ್ಲೆಡೆ ಆನಂದ

ಮೇಷ
ನಿಮ್ಮ ಕಾರ್ಯಶೈಲಿ ಇತರರಿಗೂ ಪ್ರೋತ್ಸಾಹ ತುಂಬುವುದು. ಆದರೆ ಆರ್ಥಿಕ ಒತ್ತಡ ಕಾಡಲಿದೆ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣಲಿದೆ.
ವೃಷಭ
ನಿಮ್ಮ ಬದುಕಿನ ಮೇಲೆ ಪ್ರಭಾವ ಬೀರಬಲ್ಲ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ. ಮನಸ್ಸಿನ ಚಿಂತೆ ಪರಿಹಾರ. ಕೌಟುಂಬಿಕ ಸಮಾಧಾನ.
ಮಿಥುನ
ಪ್ರೀತಿಗೆ ಸಂಬಂಧಿಸಿ ಹೃದಯದ ಮಾತು ಕೇಳಿ. ಇತರರ ಮಾತಿಗೆ ತಲೆದೂಗಿದರೆ ನೀವು ನೆಮ್ಮದಿ ಕಳಕೊಳ್ಳುವಿರಿ. ಆಲೋಚಿಸಿ ನಿರ್ಧರಿಸಿ.
ಕಟಕ
ಗುರಿ ಸಾಧಿಸಲು ಇಂದು ಕಠಿಣ ಪರಿಶ್ರಮ ಪಡಬೇಕು. ಸುಲಭದಲ್ಲಿ ಯಾವುದೂ ಸಾಧ್ಯವಾಗದು. ಅನಿರೀಕ್ಷಿತ ಅಡ್ಡಿಗಳು ಒದಗುತ್ತವೆ.
ಸಿಂಹ
ಯೋಜನೆ ರೂಪಿಸಿ ದರೆ ಸಾಲದು. ಅದನ್ನು ಅನುಷ್ಠಾನಿಸಬೇಕು. ಇದನ್ನು ನೀವಿಂದು ಅರಿತುಕೊಳ್ಳಬೇಕು. ಆರ್ಥಿಕ ಒತ್ತಡ.
ಕನ್ಯಾ
ವೃತ್ತಿಯಲ್ಲಿ ತೀವ್ರ ಪೈಪೋಟಿ ಎದುರಿಸುವಿರಿ. ಅದನ್ನು ನಿಭಾಯಿಸಲು ದೃಢ ಮನಸ್ಸು ಮತ್ತು ಚಾಣಾಕ್ಷತೆ ಅವಶ್ಯ. ಸೋಲು ಒಪ್ಪಿಕೊಳ್ಳದಿರಿ.
ತುಲಾ
ವೈಯಕ್ತಿಕ ವ್ಯವಹಾರದಲ್ಲಿ ಹಿನ್ನಡೆ.ಅದನ್ನು ಸಮರ್ಥವಾಗಿ ನಿಭಾಯಿಸಲು ಆದ್ಯತೆ ಕೊಡಿ. ಕೆಲವರ ಮಾತು ಕೇಳಿ ತಪ್ಪು ಹೆಜ್ಜೆ ಇಡಬೇಡಿ.
ವೃಶ್ಚಿಕ
ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ. ಆಲೋಚಿಸಿ ವ್ಯವಹರಿಸಿ. ಇಲ್ಲವಾದರೆ ಸಂಕಷ್ಟ. ನಿಮಗೆ ಸಂಕಷ್ಟ ಕೊಡಲು ಕೆಲವರು ಯತ್ನಿಸುವರು.
ಧನು
ಆಪ್ತರೊಂದಿಗೆ ಹೆಚ್ಚು
ಕಾಲ ಕಳೆಯುವ ಅವಕಾಶ. ಅವರ ಸಂತೋಷದಲ್ಲಿ ನೀವೂ ಭಾಗಿಯಾಗುವಿರಿ. ಕೌಟುಂಬಿಕ ಸಹಕಾರ. ಖರ್ಚು ಹೆಚ್ಚಬಹುದು.
ಮಕರ
ಸಂತೋಷ ಮತ್ತು ಯಶಸ್ಸಿನ ದಿನ. ನಿಮಗೆ ಪೂರಕ ಬೆಳವಣಿಗೆ. ಕೌಟುಂಬಿಕ ಮನಸ್ತಾಪ ನಿವಾರಣೆ. ಹಾಗಾಗಿ ಮನಸ್ಸಿಗೂ ನಿರಾಳತೆ.
ಕುಂಭ
ಕೆಲವರಿಗೆ ನಿಮ್ಮ ಕಾರ್ಯದ ಬಗ್ಗೆ ಅಸಂತೃಪ್ತಿ ಮೂಡಲಿದೆ. ಅದು ನಿಮ್ಮ ಮನಸ್ಸು ಘಾಸಿಗೊಳಿಸುವುದು. ನಿರ್ಲಿಪ್ತರಾಗಿರಿ.
ಮೀನ
ಹೊಸ ವ್ಯವಹಾರ ಆರಂಭಿಸಲು ಸಕಾಲ. ಹಿಂದೆ ಫಲ ನೀಡದಿದ್ದ ಪ್ರಯತ್ನಗಳು ಇಂದು ಫಲ ಕೊಟ್ಟೀತು. ಮರಳಿ ಯತ್ನವ ಮಾಡಿ. ನೆಮ್ಮದಿ ಲಭ್ಯ.

Most Read

error: Content is protected !!