January14, 2026
Wednesday, January 14, 2026
spot_img

ದಿನಭವಿಷ್ಯ: ಕೆಲಸ ಯಾವುದೇ ಇರಲಿ ಇಂದು ಹೆಚ್ಚು ಉತ್ಸಾಹ ನಿಮ್ಮಲಿರಲಿದೆ

ಮೇಷ.
ಯಾವುದೇ ಕೆಲಸ ಉತ್ಸಾಹದಿಂದ ಮಾಡುವಿರಿ. ಇಂದು ನಿಮ್ಮ ಬಳಿಗೆ ಬೇಸರ, ನಿರುತ್ಸಾಹ ಸುಳಿಯದು. ಸಂಗಾತಿಯ ಸಾಂಗತ್ಯದಿಂದ ಖುಷಿ.
ವೃಷಭ
ವೇತನದಲ್ಲಿ ಹೆಚ್ಚಳ ಸಂಭವ. ಹಣದ ಹರಿವು ಹೆಚ್ಚಳ. ಕೌಟುಂಬಿಕ ಬೇಡಿಕೆ ಈಡೇರಿಸಿ. ಆಪ್ತರ ಜತೆಗಿನ ಭಿನ್ನಮತ ನಿವಾರಣೆ.
ಮಿಥುನ
ಸುಲಭ ಯಶಸ್ಸು. ಸಣ್ಣ ವಿಷಯವನ್ನು ದೊಡ್ಡದಾಗಿ ಹಿಗ್ಗಿಸಬೇಡಿ. ನೀವಾಗಿ ಸಮಸ್ಯೆ ತಂದುಕೊಳ್ಳದಿರಿ. ಬಂಧು ಸಹಕಾರ.
ಕಟಕ
ಸಂತೋಷ, ಬೇಸರ ಎರಡೂ ಸೇರಿದ ದಿನ. ದುಡುಕಿನ ನಿರ್ಧಾರ ಹಾನಿ ತಂದೀತು. ಕೌಟುಂಬಿಕ ವಾಗ್ವಾದ. ಸಂಜೆ ವೇಳೆಗೆ ಹರ್ಷೋಲ್ಲಾಸ.
ಸಿಂಹ
ಹುರಿದುಂಬಿಸುವ ವ್ಯಕ್ತಿಗಳ ಜತೆ ಸೇರಿ. ನೆಗೆಟಿವ್ ಚಿಂತನೆ ಹರಡುವವರನ್ನು ದೂರವಿಡಿ. ಧನಲಾಭ. ಸಾಂಸಾರಿಕ ನೆಮ್ಮದಿ.
ಕನ್ಯಾ
ಬಯಸಿದ ಗುರಿ ಸಾಽಸಲು ಬುದ್ಧಿಮತ್ತೆ ಉಪಯೋಗಿಸಿ. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸಬೇಡಿ. ಕೌಟುಂಬಿಕ  ಉದ್ವಿಗ್ನತೆ ಸಂಭವ.
ತುಲಾ
ಇಷ್ಟವಿಲ್ಲದ ಕಾರ್ಯ ಮಾಡಲು ಹೋಗದಿರಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು.  ಆಹಾರ ಕ್ಲಪ್ತ ಕಾಲದಲ್ಲಿ ಸ್ವೀಕರಿಸಿ.
ವೃಶ್ಚಿಕ
ಈ ದಿನ ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ತಂದೀತು. ಸಂತೋಷ ಕೆಡಿಸುವ ಬೆಳವಣಿಗೆ. ಅಭದ್ರತೆಯ ಭಾವನೆ ಕಾಡಲಿದೆ.
ಧನು
ಆಶಾವಾದದಿಂದ ಕಾರ್ಯ ನಿರ್ವಹಿಸುವ ಅವಕಾಶ. ನೆಗೆಟಿವ್ ಚಿಂತನೆ ನಿವಾರಣೆ. ಆತ್ಮೀಯ ವ್ಯಕ್ತಿಯ ಕುರಿತ ತಪ್ಪುಭಾವ ನೀಗುವುದು.
ಮಕರ
ನೀವು ಬಯಸಿದ್ದು ನಡೆಯಲಿದೆ. ವೃತ್ತಿಯಲ್ಲಿ ಯಶಸ್ಸು.  ಖಾಸಗಿ ಸಂಬಂಧ ಸುಮಧುರ. ಇಂದು ನಡೆಸುವ ಹೂಡಿಕೆ ಫಲ ನೀಡಲಿದೆ.
ಕುಂಭ
ಹೊಸ ಗುರಿ ಇರಿಸಿಕೊಂಡಿದ್ದರೆ ಅದನ್ನು ಸಾಽಸುವಿರಿ.   ಸಮಸ್ಯೆಯೊಂದು ಪರಿಹಾರವಾದ ನಿರಾಳತೆ. ಕೌಟುಂಬಿಕ ಸಾಮರಸ್ಯ.
ಮೀನ
ಕೆಟ್ಟಿರುವ ಸಂಬಂಧ ಮತ್ತೆ ಚಿಗುರಲಿದೆ. ವೃತ್ತಿಯಲ್ಲಿ ಪ್ರಗತಿ.  ಆಪ್ತರ ಜತೆ ವಾಗ್ವಾದಕ್ಕೆ ಅವಕಾಶ ನೀಡದಿರಿ. ಅನವಶ್ಯ ಖರ್ಚು ಒದಗುವುದು.

Most Read

error: Content is protected !!