January14, 2026
Wednesday, January 14, 2026
spot_img

ದಿನಭವಿಷ್ಯ: ನಿಮ್ಮ ನೆಚ್ಚಿನ ಹವ್ಯಾಸವನ್ನು ಮತ್ತೆ ಕೈಗೆತ್ತಿಕೊಳ್ಳಲು ಇದೇ ಉತ್ತಮ ಸಮಯ

ಮೇಷ
ನಿಮ್ಮ ಮೆಚ್ಚಿನ ಹವ್ಯಾಸವನ್ನು ಮತ್ತೆ ಕೈಗೆತ್ತಿಕೊಳ್ಳಲು ಸಕಾಲ. ಇತರರ ಒತ್ತಡಕ್ಕೆ ಮಣಿಯ ಬೇಡಿ. ಕೌಟುಂಬಿಕ ಅಶಾಂತಿ ನಿವಾರಣೆ.
ವೃಷಭ
ನಿಮ್ಮ ಕಾರ್ಯದಲ್ಲಿ ಇಂದು ಹೆಚ್ಚು ಶ್ರಮ ಹಾಕಬೇಕಾಗುವುದು. ಇಲ್ಲವಾದರೆ ಕೆಲಸ ಕೈಗೂಡದು. ಕೆಲವರಿಂದ ದಿನವಿಡೀ ಕಿರಿಕಿರಿ.
ಮಿಥುನ
ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಡಿ. ಹಿರಿಯರ ಆರೋಗ್ಯ ಚಿಂತೆಗೆ ಕಾರಣವಾದೀತು. ಆರ್ಥಿಕ ಪರಿಸ್ಥಿತಿಯೂ ಕಷ್ಟಕರ.
ಕಟಕ
ವೃತ್ತಿಯಲ್ಲಿ ಸಮಸ್ಯೆ ಎದುರಿಸುವಿರಿ. ಕೆಲವರಿಂದ ವಿನಾಕಾರಣ ನಿಮಗೆ ವಿಘ್ನ. ಕೌಟುಂಬಿಕ ವಾಗಿಯೂ ಒತ್ತಡ ಹೆಚ್ಚಿ ಸುವ ಬೆಳವಣಿಗೆ.
ಸಿಂಹ
ಕೆಲಸ ಸಾಽಸಿ ಪ್ರಶಂಸೆಗೆ ಕಾದು ನೋಡುವಿರಿ. ಆದರೆ ನಿಮ್ಮ ಕೆಲಸ ಮೆಚ್ಚಿ ಕೊಳ್ಳುವವರಿಗಿಂತ  ಟೀಕಿಸುವವರೇ ಜಾಸ್ತಿ. ಇದಕ್ಕೆಲ್ಲ ತಲೆ ಕೆಡಿಸದಿರಿ.
ಕನ್ಯಾ
ಇತರರ ಬದುಕಿನ ಮೇಲೆ ನೀವು ಪರಿಣಾಮ ಬೀರಬಲ್ಲಿರಿ. ಆದರೆ ಅವರ ಬದುಕನ್ನು ಹಾಳು ಗೆಡವಬೇಡಿ. ಇತರರ ಬಗ್ಗೆ ಕಾಳಜಿ ಇರಲಿ.
ತುಲಾ
ಭಾವನಾತ್ಮಕ ಏರುಪೇರು. ಸಂಬಂಧ ಗಳನ್ನು ಪರಾಮರ್ಶೆ ಮಾಡಿಕೊಳ್ಳುವ ಸಮಯ. ಆತ್ಮೀಯರು ದೂರವಾಗುವರು.
ವೃಶ್ಚಿಕ
ದೀರ್ಘ ಕಾಲದ ಬಳಿಕ ಹಳೆಯ ಸ್ನೇಹಿತರ ಸಂಪರ್ಕ ಸಾಽಸುವಿರಿ. ವೃತ್ತಿಯಲ್ಲಿ ಸಣ್ಣಪುಟ್ಟ ಕಿರಿಕಿರಿಗಳು ಬಾಽಸುತ್ತವೆ. ಸಂಜೆ ವೇಳೆಗೆ ಸಮಾಧಾನ.
ಧನು
ನಿಮ್ಮ ಹೊಸ ಯೋಜನೆ ನಿರೀಕ್ಷಿತ ಫಲ ನೀಡುವುದಿಲ್ಲ. ನಿಮ್ಮ ಶ್ರಮ ವ್ಯರ್ಥವಾಗುವುದು. ಆರ್ಥಿಕ ಒತ್ತಡವೂ ಹೆಚ್ಚಲಿದೆ.
ಮಕರ
ಕೌಟುಂಬಿಕ ಕಾರ್ಯಗಳಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಕೆಲವು ಕಾರ್ಯಗಳೂ ಬಾಕಿ ಉಳಿಯುತ್ತವೆ. ಬಂಧುಗಳ ಜತೆ ಆತ್ಮೀಯ ಮಾತುಕತೆ.
ಕುಂಭ
ಬದಲಾವಣೆಯ ಗಾಳಿ ಬೀಸಲಿದೆ. ಅದಕ್ಕೆ ಎದುರಾಗಿ ಹೋಗದಿರಿ. ನೀವೂ ಅದರೊಂದಿಗೆ ಸಾಗಿ. ಜತೆಗೆ ಬರದವರನ್ನು ಬಿಟ್ಟು ಸಾಗಬೇಕು.
ಮೀನ
ಕೌಟುಂಬಿಕ ಬಿಕ್ಕಟ್ಟು. ಕುಟುಂಬದ ಸದಸ್ಯರ ಬೇಡಿಕೆಯನ್ನು ಪೂರೈಸುವುದು ನಿಮ್ಮ ಕರ್ತವ್ಯವಾಗಲಿದೆ. ಆದರೆ ಕಷ್ಟವೂ ಇದೆ.

Most Read

error: Content is protected !!