January14, 2026
Wednesday, January 14, 2026
spot_img

ದಿನಭವಿಷ್ಯ: ಹಣದ ವಿಚಾರ ದಿನವೂ ಇದ್ದಿದ್ದೇ, ಇಂದು ಅದರ ಬಗ್ಗೆ ಗಮನ ಬೇಡ

ಮೇಷ
ಇಂದು ಹಣದ ವಿಚಾರ ಪಕ್ಕಕ್ಕಿಡಿ. ಆಗಲೇಬೇಕಾದ ಇತರ ಕಾರ್ಯಕ್ಕೆ ಗಮನ ಕೊಡಿ.  ಎಲ್ಲರ ಗಮನ ಸೆಳೆಯುವ ಸಾಧನೆ ಮಾಡುವಿರಿ.
ವೃಷಭ
ಅನ್ಯರ ಖಾಸಗಿ ವಿಚಾರದಲ್ಲಿ ಮೂಗು ತೂರಿಸಬೇಡಿ. ಕುಟುಂಬ ಸದಸ್ಯರಿಗೆ ಸಮಯ ಕೊಡಿ. ಕಲಹಕ್ಕೆ ಮುಂದಾಗಬೇಡಿ.
ಮಿಥುನ
ಸುತ್ತ ನೋಡಿ, ಒಳ್ಳೆಯ ವಿಚಾರಗಳಿಗೆ ಗಮನ ಕೊಡಿ. ಆಗ ನಿಮ್ಮ ವೈಯಕ್ತಿಕ ಕೊರಗು ಕಡಿಮೆಯಾಗಲಿದೆ. ಎಲ್ಲರ ಜತೆ ಬೆರೆಯಿರಿ.
ಕಟಕ
ಇತರರ ನಡೆಯ ಕುರಿತು ಎಚ್ಚರವಿರಲಿ. ನಿಮ್ಮ ಗುಟ್ಟು ಅವರಿಗೆ ಬಿಟ್ಟು ಕೊಡಬೇಡಿ. ದೀರ್ಘಾವಽ     ಆರ್ಥಿಕ ಯೋಜನೆ ಫಲಕಾರಿಯೆನಿಸದು.
ಸಿಂಹ
ಒತ್ತಡದ ದಿನ. ಎಲ್ಲವೂ ಸರಿಯಾಗಿ ನಡೆಯಲು ಹೆಚ್ಚು ಶ್ರಮ ಹಾಕಬೇಕು. ಪ್ರೀತಿಯ ವಿಷಯದಲ್ಲಿ ಹಿನ್ನಡೆ ಉಂಟಾಗಬಹುದು.
ಕನ್ಯಾ
ಲಾಭವೂ ಇಲ್ಲದ, ನಷ್ಟವೂ ಇಲ್ಲದ ದಿನವಿಂದು. ಆದರೂ ತೃಪ್ತಿಯಿಂದ ದಿನ ಕಳೆಯುವಿರಿ.  ಆಪ್ತರ ಜತೆ ಆತ್ಮೀಯ ಒಡನಾಟ.
ತುಲಾ
ನಿಮ್ಮನ್ನು ಕಾಡುವ ಭಯ, ಚಿಂತೆಯ ಕುರಿತು ಮುಕ್ತವಾಗಿ ಚಿಂತಿಸಿ. ಅದನ್ನು ಮರೆಗೆ ಸರಿಸಬೇಡಿ. ಆಪ್ತರ ಜತೆ ಭಾವನೆ ಹಂಚಿಕೊಳ್ಳಿ.
ವೃಶ್ಚಿಕ
ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಆರ್ಥಿಕ ಪರಿಸ್ಥಿತಿ ಸ್ಥಿರ. ಸ್ವಂತ ಉದ್ಯೋಗಿಗಳಿಗೆ ಉನ್ನತಿ. ಆರೋಗ್ಯ ಸಮಸ್ಯೆ ನಿವಾರಣೆ.
ಧನು
ಮಾಡಲು ತುಂಬ ಕೆಲಸವಿದೆ, ಸಮಯ ಸಾಲದು ಎಂಬ ಕೊರಗು ನಿಮ್ಮದು. ನೀವೇ ಸಮಯ ಮಾಡಿಕೊಳ್ಳಬೇಕು. ಬಂಧುಗಳಿಂದ  ಖುಷಿ.
ಮಕರ
ನಿಮ್ಮ ಕೋಪ ನಿಯಂತ್ರಿಸಬೇಕು. ಇಲ್ಲವಾದರೆ ಇತರರ ವಿರೋಧ ಕಟ್ಟಿಕೊಳ್ಳುವಿರಿ. ಹಣದ ಕೊರತೆ, ಆಪ್ತರಿಂದ ನೆರವು, ಸಹಕಾರ.
ಕುಂಭ
ಹರುಷದ ದಿನ. ಕಾರಣವಿಲ್ಲದೇ ಉಲ್ಲಾಸ. ಹಳೆಯ ಸಮಸ್ಯೆ ಪರಿಹಾರ. ಆಪ್ತರ ಜತೆಗಿನ ಮುನಿಸು ಶಮನ. ಆರ್ಥಿಕ ಕೊರತೆ ನೀಗುವುದು.
ಮೀನ
ಕುಟುಂಬದಲ್ಲಿ ಉಂಟಾಗಿದ್ದ ವೈಮನಸ್ಸು ನಿವಾರಣೆ. ಎಲ್ಲವೂ ಹಿತಕರವಾಗಿ ಕಾಣಲಿದೆ. ಮಕ್ಕಳು ಹರಿತ ವಸ್ತುವಿನ ಜತೆ ಆಡಬಾರದು.

Most Read

error: Content is protected !!