ಹೊಸದಿಗಂತ ಯಾದಗಿರಿ:
ವಸತಿ ಶಾಲೆಯ ಹಾಸ್ಟೇಲ್ ನಲ್ಲಿ ಶೌಚಾಲಯದಲ್ಲಿ ವಿದ್ಯಾರ್ಥಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ವಸತಿ ಶಿಕ್ಷಣ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರು ವಸತಿ ಶಾಲೆಯ ಪ್ರಾಚಾರ್ಯರು ಸೇರಿ ಮೂರು ಜನರನ್ನು ಅಮಾನತ್ತುಗೊಳಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ.
ಪ್ರಾಚಾರ್ಯೆ ಬಸ್ಸಮ್ಮ, ವಾರ್ಡನ್ ಗೀತಾ ಸಾಲಿಮನಿ, ವಿಜ್ಞಾನ ಶಿಕ್ಷಕ ನರಸಿಂಹಮೂರ್ತಿ ಹಾಗೂ ದೈಹಿಕ ಶಿಕ್ಷಕ ಶ್ರೀಧರ ಅಮಾನತ್ತುಗೊಂಡವರು. ವಿದ್ಯಾರ್ಥಿನಿ ಹೆರಿಗೆಯಿಂದ ಮಕ್ಕಳ ಹಕ್ಕುಗಳ ಆಯೋಗ ತೀವ್ರ ಕಳವಳ ವ್ಯಕ್ತಪಡಿಸಿದೆ.ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ತರಹದ ದುರ್ಘಟನೆಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು ಬೇಸರ ತಂದಿದೆ ಎಂದು ಆಯೋಗ ತಿಳಿಸಿದೆ. ಮಗುವಿನ ದೈಹಿಕ ಬದಲಾವಣೆ ಆದ ಸಂದರ್ಭದಲ್ಲಿ ಅಧಿಕಾರಿಗಳು ಗಮನಹರಿಸಬೇಕಿತ್ತು. ತಿಂಗಳಲ್ಲಿ ಒಂದು ಬಾರಿ ವೈದ್ಯಕೀಯ ತಪಾಸಣೆ ಮಾಡಬೇಕಿತ್ತು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಘಟನೆಯಲ್ಲಿ ಎಡವಿದ್ದಾರೆ ಎಂದಿದೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮನತ್ತಾದ ಪ್ರಾಚಾರ್ಯೆ ವಾರ್ಡನ್, ಸ್ಟಫ್ ನರ್ಸ್ ಸೇರಿ ಮತ್ತೋರ್ವನ ಮೇಲೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಕಲಂ 64 ಬಿಎನ್ ಎಸ್, ಕಲಂ 4,6 ಹಾಗೂ 19 ಪೋಕ್ಸೋ ಮತ್ತು 33,34 ಬಾಲ ನ್ಯಾಯ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ಮುಂದಿನ ವಿಚಾರಣೆ ನಡೆಸಲಾಗಿದೆ.