January21, 2026
Wednesday, January 21, 2026
spot_img

ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್‌: ನಮ್ಮ ಮೆಟ್ರೋದಲ್ಲಿ ಸಿಕ್ಕಾಪಟ್ಟೆ ರಶ್‌, ಕೂರೋಕಲ್ಲ ನಿಲ್ಲೋಕೂ ಜಾಗ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರ ಮುಷ್ಕರಕ್ಕೆ ಇಳಿದಿದ್ದಾರೆ. ಈ ಎಫೆಕ್ಟ್‌ನಿಂದಾಗಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದಾರೆ.

ಬಸ್ ಸರಿಯಾಗಿ ಸಿಗದೆ ಪರದಾಡುತ್ತಿರುವ ಜನರು ಮೆಟ್ರೋದ ಮೊರೆ ಹೋಗಿದ್ದಾರೆ. ಇದೀಗ ಮೆಟ್ರೋ ನಿಲ್ದಾಣಗಳಲ್ಲಿ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಓಡಾಡ್ತಿದ್ದಾರೆ. ದಿನನಿತ್ಯಕ್ಕಿಂತ ಮೆಟ್ರೋ ಪ್ರಯಾಣಿಕರು ಹೆಚ್ಚಾಗಿರುವುದರಿಂದ ತೊಂದರೆಯಾಗದಂತೆ ಮೆಟ್ರೋ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

ಮೆಟ್ರೋಗಳಲ್ಲಿ ಕೂರೋದಕ್ಕಲ್ಲ, ನಿಲ್ಲೋದಕ್ಕೂ ಜಾಗ ಇಲ್ಲ ಎನ್ನುವಂಥ ಪರಿಸ್ಥಿತಿ ಉಂಟಾಗಿದೆ. ಸಮಯಕ್ಕೆ ಸರಿಯಾಗಿ ಆಫೀಸ್‌, ಕಚೇರಿ, ಶಾಲಾ ಕಾಲೇಜುಗಳಿಗೆ ತೆರಳಲಾಗದೆ ಪರದಾಟ ಮಾಡುವಂತಾಗಿದೆ.

ಮೆಟ್ರೋ ನಿಲ್ದಾಣದ ಹೊರಗಿನಿಂದಲೂ ಪ್ರಯಾಣಿಕರು ಕ್ಯೂ ನಿಂತಿದ್ದಾರೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿ ಕ್ಯೂ ಗಟ್ಟಲೆ ಪ್ರಯಾಣಿಕರು ಜಮಾಯಿಸಿದ್ದರಿಂದ ಮೆಟ್ರೋ ನಿಲ್ದಾಣದ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. 

Must Read