ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಫಾಲಿ ವರ್ಮಾ ಅವರ ದಾಖಲೆಯ ದ್ವಿಶತಕ (205), ಸ್ಮೃತಿ ಮಂಧಾನ ಬಾರಿಸಿದ ಅಮೋಘ ಶತಕ (149) ಹಾಗೂ ಸ್ನೆಹ್ ರಾಣಾ ಅವರ ವಿಶ್ವ ದಾಖಲೆಯ 10 ವಿಕೆಟ್ಗಳ ನೆರವು ಭಾರತ ಮಹಿಳೆಯ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ (IND vs SA) 10 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸಿದೆ.
ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಗೆಲುವಿಗೆ 37 ರನ್ಗಳ ಗುರಿ ಪಡೆದಿದ್ದ ಭಾರತ 9.2 ಓವರ್ಗಳಲ್ಲಿ ವಿಜಯ ದಾಖಲಿಸಿತು. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ರನ್ ಗಳಿಸಿ ಅಜೇಯರಾಗಿ ಉಳಿದರು.
ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಹರ್ಮನ್ಪ್ರೀತ್ ಬಳಗ 15.1 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ದಾಖಲಿಸಿತು. ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಮಹಿಳೆಯರ ಬಳಗ ಮೊದಲ ಇನ್ನಿಂಗ್ಸ್ನಲ್ಲಿ 84.3 ಓವರ್ಗಳಿಗೆ 266 ರನ್ ಬಾರಿಸಿ ಆಲ್ಔಟ್ ಆಯಿತು. 337 ರನ್ಗಳ ಹಿನ್ನಡೆಯೊಂದಿಗೆ ಫಾಲೋ ಆನ್ಗೆ ಗುರಿಯಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ, 373 ಗಳಿಸಿಇತು. ಭಾರತ 37 ರನ್ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.