ಓಂ, ಅಲ್ಲಾ ಎರಡೂ ಒಂದೇ: ವಿವಾದಾತ್ಮಕ ಹೇಳಿಕೆ ನೀಡಿದ ಜಮಿಯತ್ ಉಲೆಮಾ ಇ ಹಿಂದ್ ಅಧ್ಯಕ್ಷ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮಿಯತ್ ಉಲೇಮಾ-ಇ-ಹಿಂದ್ (Jamiat Ulema-e-Hind) ಮುಖ್ಯಸ್ಥ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಈ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಹಿಂದು ಧರ್ಮದ ಪವಿತ್ರ ಸಂಕೇತವಾದ ಓಂ ಮತ್ತು ಮುಸ್ಲಿಮರ ಅಲ್ಲಾ ಒಂದೇ ಎಂದು ಮೌಲಾನಾ ಸೈಯದ್ ಅರ್ಷದ್ ಮದನಿ ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಜಮೀಯತ್ ಉಲೇಮಾ-ಇ-ಹಿಂದ್‌ನ 3 ದಿನಗಳ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿದ ಅವರು, ಶ್ರೀರಾಮನಾಗಲಿ, ಬ್ರಹ್ಮನಾಗಲಿ ಯಾರೂ ಇಲ್ಲದಿದ್ದಾಗ ಧರ್ಮಗುರುಗಳು ಯಾರನ್ನು ಪೂಜಿಸುತ್ತಿದ್ದರು? ಆಗ ಕೆಲವರು ಓಂ ಆರಾಧನೆ ಮಾಡುತ್ತಿದ್ದರು ಎಂದು ಹೇಳಿದ್ದರು. ನಂತರ ನಾನು ಅವರಿಗೆ ಹೇಳಿದ್ದೇನೆಂದರೆ, ನಿಮ್ಮ ಓಂನನ್ನೇ ನಾವು ಅಲ್ಲಾ ಎಂದು ಕರೆಯುತ್ತೇವೆ. ನೀವು ಈಶ್ವರ ಎಂದು ಕರೆಯುವವನನ್ನು ಪಾರ್ಸಿಯಲ್ಲಿ ಖುದಾ ಎಂದು ಕರೆಯಲಾಗುತ್ತದೆ. ಇಂಗ್ಲಿಷ್ ಮಾತನಾಡುವ ಜನರು ಆತನನ್ನೇ ದೇವರು ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!