ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾ ನೋಡಿದ ಅನೇಕ ನಾಯಕ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದೀಗ ಕರಾವಳಿ ಮೂಲದ ‘ರಂಗಿತರಂಗ’ ಖ್ಯಾತಿಯ ನಟಿ ಆವಂತಿಕಾ ಶೆಟ್ಟಿ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ರಿಷಬ್ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರವನ್ನು ಒಂದಲ್ಲ, ಎರಡು ಸಲ ನೋಡಿದ್ದಾರೆ. ಅದರಲ್ಲೂ ಎರಡನೇ ಸಲ ನೋಡಲು ಹೋಗುವಾಗ ಸುಮ್ಮನೆ ಹೋಗಿಲ್ಲ ಎಂಬುದನ್ನೂ ಹೇಳಿಕೊಂಡಿದ್ದಾರೆ.
#KantaraMovie 1st time I watched in Bangalore I lost my voice(obviously coz of the cheering) so for the 2nd time watch in Mumbai I couldn’t stop myself from buying a whistle.@shetty_rishab thank you for this beautiful piece of art. pic.twitter.com/TEpeykCIva
— Avantika Shetty (@avantikashetty1) October 17, 2022
ನಾನು ಮೊದಲನೇ ಸಲ ಕಾಂತಾರ ಚಿತ್ರವನ್ನು ಬೆಂಗಳೂರಿನಲ್ಲಿ ನೋಡಿ, ನನ್ನ ಧ್ವನಿಯನ್ನೇ ಕಳೆದುಕೊಂಡಿದ್ದೆ. ಖಂಡಿತವಾಗಿಯೂ ಅದು ಸಿನಿಮಾ ನೋಡುವಾಗ ಕೂಗಿ ಕೂಗಿಯೇ ಹಾಗಾಗಿದ್ದು. ಹೀಗಾಗಿ ಎರಡನೇ ಸಲ ಕಾಂತಾರವನ್ನು ಮುಂಬೈನದಲ್ಲಿ ನೋಡುವಾಗ ವಿಸಲ್ ತೆಗೆದುಕೊಂಡು ಹೋಗಿದ್ದೆ ಎಂಬುದಾಗಿ ಆವಂತಿಕಾ ಹೇಳಿಕೊಂಡಿದ್ದಾರೆ. ಇಂಥದ್ದೊಂದು ಸುಂದರ ಕಲಾತ್ಮಕ ಸಿನಿಮಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದು ಅವರು ರಿಷಬ್ ಶೆಟ್ಟಿಗೆ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.