ಕುತುಬ್‌ ಮಿನಾರ್‌ ಬಗ್ಗೆ ಮಾಜಿ ಪುರಾತತ್ವ ಇಲಾಖೆ ನಿರ್ದೇಶಕ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದೆಲ್ಲೆಡೆ ಸ್ಮಾರಕಗಳ ಬಗ್ಗೆ ವಿವಾದಗಳು ಭುಗಿಲೇಳುತ್ತಿರುವ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆಯ ಮಾಜಿ ನಿರ್ದೇಶಕರು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದು ಕುತುಬ್‌ ಮಿನಾರ್‌ ನಿರ್ಮಿಸಿದ್ದು ಕುತುಬ್‌ ಉದ್‌ ದೀನ್‌ ಐಬಕ್‌ ಅಲ್ಲ ಎಂದು ಹೇಳಿದ್ದಾರೆ.

5ನೇ ಶತಮಾನದಲ್ಲಿ ದೆಹಲಿಯನ್ನಾಳುತ್ತಿದ್ದ ವಿಕ್ರಮಾದಿತ್ಯ ಎಂಬ ರಾಜನು ಸೂರ್ಯನ ಪರಿವೀಕ್ಷಣೆಗೆ ಅದನ್ನು ನಿರ್ಮಾಣ ಮಾಡಿದ್ದಾನೆ. ಇದು ಕುತುಬ್ ಮಿನಾರ್ ಅಲ್ಲ ಸೂರ್ಯ ಗೋಪುರ (ವೀಕ್ಷಣಾ ಗೋಪುರ) ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆ ಅನೇಕ ಪುರಾವೆಗಳಿವೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಹೇಳಿದ್ದಾರೆ. ಎಎಸ್ ಐ ಪರವಾಗಿ ಹಲವು ಬಾರಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಕುತುಬ್‌ ಗೋಪುರವು 25 ಇಂಚು ಓರೆಯಾಗಿದೆ. ಸೂರ್ಯನನ್ನು ವೀಕ್ಷಿಸಲು ಅನುಕೂಲವಾಗಲೆಂದು ಈ ರಚನೆಯಿದೆ. ಜೂನ್‌ 21ರಂದು ಅಯನ ಸಂಕ್ರಾಂತಿಯ ನಡುವೆ ಆ ಪ್ರದೇಶದ ಮೇಲೆ ಕನಿಷ್ಟ ಅರ್ಧಗಂಟೆ ನೆರಳು ಬೀಳುವುದಿಲ್ಲ. ಇದು ವಿಜ್ಞಾನ ಮತ್ತು ಪುರಾತತ್ತ್ವ ಶಾಸ್ತ್ರದ ಸತ್ಯ. ಕುತುಬ್‌ ಮಿನಾರ್‌ ಗೂ ಅದರ ಪಕ್ಕದಲ್ಲಿರುವ ಮಸೀದಿಗೂ ಯಾವುದೇ ಸಂಬಂಧವಿಲ್ಲ. ಕುತುಬ್‌ ಮಿನಾರ್‌ ಎಂದು ಕರೆಯಲ್ಪಡುವ ಕಟ್ಟಡವು ಸ್ವತಂತ್ರ ರಚನೆಯಾಗಿದೆ. ಕುತುಬ್ ಮಿನಾರ್‌ನ ಬಾಗಿಲು ಕೂಡ ಉತ್ತರಕ್ಕೆ ಮುಖ ಮಾಡಿದೆ. ಇದು ರಾತ್ರಿ ಸಮಯದಲ್ಲಿ ಧ್ರುವ ನಕ್ಷತ್ರವನ್ನು ನೋಡುವುದನ್ನು ಸೂಚಿಸುತ್ತದೆ.

ಈ ಮಾತುಗಳನ್ನಾಡಿರುವ ಶರ್ಮಾ ಅವರು ಹಲವು ಬಾರಿ ಎಎಸ್ ಐ ಪರವಾಗಿ ಕುತುಬ್ ಮಿನಾರ್ ಸರ್ವೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!