ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಇಂದು ಮತ್ತೊಂದು ಚೀತಾ ಸಾವನ್ನಪ್ಪಿದೆ. ಆ ಮೂಲಕ ಸಾವಿನ ಸಂಖ್ಯೆ 10 ಕ್ಕೇರಿದೆ.

2022 ರಲ್ಲಿ ನಮೀಬಿಯಾ ಚೀತಾಗಳನ್ನು (Namibian Cheetah) ಭಾರತದಲ್ಲಿ ಮತ್ತೆ ಪರಿಚಯಿಸಲಾಗಿತ್ತು. ಇಂದು ಮೃತಪಟ್ಟ ನಮೀಬಿಯಾದ ಚೀತಾ ‘ಶೌರ್ಯ’ ಎಂದು ಗುರುತಿಸಲಾಗಿದೆ.

ಇಲ್ಲಿಯವರೆಗೆ ರಾಷ್ಟ್ರೀಯ ಉದ್ಯಾನದಲ್ಲಿ ಏಳು ವಯಸ್ಕ ಮತ್ತು ಮೂರು ಚೀತಾ ಮರಿಗಳು ಸಾವನ್ನಪ್ಪಿವೆ. ಮಧ್ಯಾಹ್ನ 3:17 ರ ಸುಮಾರಿಗೆ ನಮೀಬಿಯಾದ ಶೌರ್ಯ ಹೆಸರಿನ ಚೀತಾ ಕೊನೆಯುಸಿರೆಳೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!