ಕೃಷಿ ಕ್ಷೇತ್ರದಲ್ಲಿ ಭರ್ಜರಿ ಪ್ರಗತಿ: ಕೇರಳದ ರೈತ ಕುಟುಂಬದ ಮಾಸಿಕ ಆದಾಯದಲ್ಲಿ ಶೇ. 61.79ರಷ್ಟು ಹೆಚ್ಚಳ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಭಾರೀ ಪ್ರಗತಿ ಕಂಡುಬಂದಿದ್ದು, ರೈತ ಕುಟುಂಬಗಳ ಸರಾಸರಿ ಮಾಸಿಕ ಆದಾಯದಲ್ಲಿ ಶೇ. 61.79 ರಷ್ಟು ಹೆಚ್ಚಳವಾಗಿದೆ.
ಆರ್ಥಿಕ ಅಂಕಿಅಂಶಗಳ ಇಲಾಖೆಯ ಸಮೀಕ್ಷಾ ವರದಿಯಲ್ಲಿ ಈ ಅಂಶಗಳು ಬೆಳಕಿಗೆಬಂದಿದ್ದು, ಕೃಷಿಯಿಂದ ಜೀವನ ಸಾಗಿಸುವವರ ಮಾಸಿಕ ಆದಾಯವು ರೂ. 28,984ಕ್ಕೆ ಏರಿಕೆಯಾಗಿರುವುದು ಕಂಡುಬಂದಿದೆ.
ಕೃಷಿಕರ ಮಾಸಿಕ ಆದಾಯವು 2019 ರಲ್ಲಿ ರೂ. 17,915 ಮತ್ತು 2021 ರಲ್ಲಿ ರೂ. 22,343 ರಷ್ಟಿತ್ತು. 2021 ಮತ್ತು 2024 ರ ನಡುವೆ ಶೇ. 29.72 ರಷ್ಟು ಹೆಚ್ಚಳವಾಗಿದೆ. 2026 ರಲ್ಲಿ ನಿರೀಕ್ಷಿತ ಸರಾಸರಿ ಮಾಸಿಕ ಆದಾಯ ರೂ. 33,411 ಆಗಿರುತ್ತದೆ ಎಂದು ವರದಿ ಹೇಳುತ್ತದೆ. ಇದು 2021 ರಲ್ಲಿನ ಆದಾಯಕ್ಕಿಂತ ಶೇ. 49.54 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ 19.47 ಲಕ್ಷ ರೈತ ಕುಟುಂಬಗಳಿವೆ. ಇವುಗಳಲ್ಲಿ ಶೇ. 4.88 ರಷ್ಟು ಪರಿಶಿಷ್ಟ ಜಾತಿಗಳು, ಶೇ. 2.75 ರಷ್ಟು ಪರಿಶಿಷ್ಟ ಪಂಗಡಗಳು, ಶೇ. 45.42 ರಷ್ಟು ಹಿಂದುಳಿದ ವರ್ಗಗಳು ಮತ್ತು ಶೇ. 46.95 ರಷ್ಟು ಸಾಮಾನ್ಯ ವರ್ಗಕ್ಕೆ ಸೇರಿದ ಕುಟುಂಬಗಳಿವೆ. ಇನ್ನು ಶೇ. 32.04 ರಷ್ಟು ಕುಟುಂಬಗಳ ಮುಖ್ಯ ಆದಾಯದ ಮೂಲ ಕೃಷಿಯಾಗಿದೆ. ಪ್ರತಿ 1000 ರೈತ ಕುಟುಂಬಗಳಲ್ಲಿ 990 ಕುಟುಂಬಗಳು ಬ್ಯಾಂಕ್ ಖಾತೆಗಳನ್ನು ಹೊಂದಿವೆ ಮತ್ತು 140 ಕುಟುಂಬಗಳು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿವೆ. 1000 ಕುಟುಂಬಗಳಲ್ಲಿ ೪೧೫ ಕುಟುಂಬಗಳು ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಾರ್ಡ್‌ಗಳನ್ನು ಹೊಂದಿದ್ದು, 209 ಕುಟುಂಬಗಳು ಉದ್ಯೋಗ ಪಡೆದಿವೆ ಎಂಬ ಅಂಕಿಅಂಶ ವರದಿಯಲ್ಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!