ಕೃಷ್ಣರಾಜ ಕ್ಷೇತ್ರದಲ್ಲಿ 30 ಕೋ.ವೆಚ್ಚದಲ್ಲಿ 120ಕ್ಕೂ ಹೆಚ್ಚು ಉದ್ಯಾನವನಗಳ ಅಭಿವೃದ್ಧಿ: ಶಾಸಕ ರಾಮದಾಸ್

ಹೊಸದಿಗಂತ ವರದಿ , ಮೈಸೂರು:

ನಗರೋತ್ಥಾನ ಯೋಜನೆಯಡಿಯಲ್ಲಿ 30 ಕೋಟಿಗೂ ಹೆಚ್ಚು ಅನುದಾನದಲ್ಲಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 120ಕ್ಕೂ ಹೆಚ್ಚು ಉದ್ಯಾನವನಗಳ ಅಭಿವೃದ್ಧಿ ಪಡಿಸಿ, ಮುಂದಿನ ಐದು ವರ್ಷಗಳ ಕಾಲ ಉದ್ಯಾನವನಗಳ ನಿರ್ವಹಣೆ ಮಾಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ದೇಶದ 75ನೇ ಸ್ವಾತಂತ್ರ ವರ್ಷದಲ್ಲಿ ದೇಶಪ್ರೇಮವನ್ನು ಬೆಳೆಸುವ ದೃಷ್ಟಿಯನ್ನು ಇಟ್ಟುಕೊಂಡು, ಘರ್ ಘರ್ ತಿರಂಗ ಯೋಜನೆ ಅಡಿಯಲ್ಲಿ ನಗರಪಾಲಿಕೆ ಸದಸ್ಯರ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವುದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಪ್ರತಿಯೊಂದು ವಾರ್ಡ್ ಗಳಲ್ಲಿ ಇರುವ ಉದ್ಯಾನವನಗಳ ರಕ್ಷಿಸಿಕೊಂಡು, ಅದನ್ನು ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡುವ ಕಾರಣಕ್ಕಾಗಿ ಆಯಾ ಪ್ರತ್ಯೇಕವಾದಂತ ಉದ್ಯಾನವನ 7 ಜನ ಸ್ಥಳೀಯ ಸದಸ್ಯರ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಆಗಸ್ಟ್ 15ರ ವರೆಗೂ ಕೃಷ್ಣರಾಜ ಕ್ಷೇತ್ರದ ಎಲ್ಲಾ ವಾರ್ಡ್ ಗಳಲ್ಲಿ ಘರ್ ಘರ್ ತಿರಂಗ ಯೋಜನೆಯಡಿ ರಾಷ್ಟçಧ್ವಜವನ್ನು ಹಾರಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಕೃಷ್ಣರಾಜ ಕ್ಷೇತ್ರದಲ್ಲಿ ಬರುವಂತಹ ವಿವಿಧ ಸ್ತರದ ಜವಾಬ್ದಾರಿಯುಳ್ಳ ಕಾರ್ಯಕರ್ತರುಗಳ ಮನೆಮೇಲೆ, ವಾರ್ಡಿನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು,ಸಮಾಜದ ಮುಖಂಡರು,ಗಣ್ಯರು ಹೀಗೆ ಎಲ್ಲಾರ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ, ಭಾರತದ 75ನೇ ವರ್ಷದ ಸ್ವಾತಂತ್ರ÷್ಯ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುವೆಂಪುನಗರ ನಗರದ ಭಾಗದಲ್ಲಿ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಎಲ್ಲಾ ಅಧಿಕಾರಗಳ ತಂಡದೊAದಿಗೆ ಭೇಟಿ ನೀಡಿ, ಶಾಸಕರ ಸಮ್ಮುಖದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು. ಒಳಚರಂಡಿ, ಕುಡಿಯುವ ನೀರು,ಪಿಂಚಣಿ,ಪುಟ್ ಪಾತ್,ಬೀದಿ ದೀಪ ಸಮಸ್ಯೆಗಳನ್ನು ಸಾರ್ವಜನಿಕರು ತೆರೆದಿಟ್ಟರು. ನಗರಪಾಲಿಕೆಯ ವಲಯ ಕಛೇರಿಗಳಲ್ಲಿ ಖಾತೆ ಸಂಬAಧ ಹಣದ ಬೇಡಿಕೆ ನೀಡಲಾಗುತ್ತಿದೆ ಎಂದು ಸರೋಜಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಸ್ಥಳದಲೇ ಇದ್ದ ವಲಯ ಆಯುಕ್ತರಿಗೆ, ಈ ಕೂಡಲೇ ಅಂತಹ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಸೂಚಿಸಲಾಯಿತು. ಆ ಭಾಗದಲ್ಲಿರುವ ಚಾಮುಂಡೇಶ್ವರಿ ಮದ್ಯದ ಅಂಗಡಿಯಿAದ ರಸ್ತೆಯಲ್ಲಿ ಮದ್ಯಪಾನ ಮತ್ತು ಮನೆಗಳ ಮುಂಭಾಗದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡಲಾಗುತ್ತಿದೆ. ಆದರಿಂದ ಸ್ಥಳೀಯ ನಿವಾಸಿಗಳು ಸಂಜೆಯ ವೇಳೆಯಲ್ಲಿ ತಿರುಗಾಡಲು ತೀವ್ರ ಮುಜುಗರ ಉಂಟಾಗುತ್ತಿದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ, ಕೂಡಲೇ ಸ್ಥಳದಲ್ಲೇ ಇದ್ದ ಪೋಲಿಸ್ ನೀರಿಕ್ಷಕರಿಗೆ ಇಂದಿನಿAದಲೇ ಈ ಸ್ಥಳಕ್ಕೆ ಪೋಲಿಸ್ ಪೇದೆಯನ್ನು ನೀಯೋಜಿಸಿ, ಯಾರು ರಸ್ತೆಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೊ, ಅಂತಹ ವ್ಯಕ್ತಿಗಳ ಮೇಲೆ ಯಾವುದೇ ನಿರ್ದಾಕ್ಷಣೆಯನ್ನು ನೀಡದೆ ಕೇಸು ದಾಖಲಿಸಲು ತಿಳಿಸಲಾಯಿತು.
ವಿಶೇಷವಾಗಿ ವಾರ್ಡಿನಲ್ಲಿ ಹಲವು ಹಳೆಯದಾದ ಮರಗಳಿದ್ದು, ಅವುಗಳನ್ನು ತೆರವುಗೊಳಿಸಿಕೊಡಲು ಸ್ಥಳೀಯ ನಿವಾಸಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ, ಸ್ಥಳದಲ್ಲೇ ಇದ್ದ ಅರಣ್ಯ ಇಲಾಖೆ ಅಧಿಕಾರಿಗಳು, ವಿದ್ಯುತ್ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮನ್ವಯದಲ್ಲಿ ಸಂಬAಧಿಸಿದ ಮರಗಳನ್ನು ವೀಕ್ಷಿಸಿ, ಹಳೆಯ ಮರಗಳನ್ನು ತೆರವುಗೊಳಿಸಲು ಹಾಗೂ ಟ್ರಿಮ್ ಅವಶ್ಯಕತೆ ಇರುವ ಮರಗಳನ್ನು ಟ್ರಿಮ್ ಮಾಡಲು ಶಾಸಕರು ತಿಳಿಸಿದರು. ಇನ್ನೂ ಹಲವಾರು ಸಮಸ್ಯೆಗಳು ಬಂದAತ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ಕೂಡಲೆ ಸಮಸ್ಯೆಗಳ ಬಗ್ಗೆ ದೂರು ನೀಡಿದಂತಹ ನಿವಾಸಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ಪಡೆದು, ಅವರನ್ನು ಭೇಟಿ ಮಾಡಿ, ಸಮಸ್ಯೆಯನ್ನು ಪರಿಹರಿಸಿ, ತಮ್ಮ ಕಚೇರಿಗೆ ಮಾಹಿತಿಯನ್ನು ನೀಡಲು ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ನಗರಪಾಲಿಕೆಯ ಆಡಳಿತ ಪಕ್ಷದ ನಾಯಕ ಶಿವಕುಮಾರ್, ಮುಖಂಡರುಗಳಾದ ಶಾಂತಿವೀರಪ್ಪ,ಅನ್ನಪೂರ್ಣ,ಉಪೇAದ್ರ, ಮೈಪು ರಾಜೇಶ್, ಪ್ರಸಾದ್ ಬಾಬು, ಸಂತೋಷ್ ಶಂಭು, ಹೇಮಂತ್, ಕೇಬಲ್ ಸೋಮು,ರಾಮ್ ಪ್ರಸಾದ್, ನಾಗೇಶ್,ಮನು ಅಪ್ಪಿ,ಸಂಪತ್ ಕುಮಾರ್,ಶೋಭ, ಚಂದ್ರು,ಮಾಲಾ,ಉಮಾ,ಚAದ್ರಶೇಖರ್,ಅರವಿAದ,ಠಾಗೂರ್,ಸAತೋಷ್ ಗ್ರಿಲ್,ರಮೇಶ್,ಗೀರೀಶ್, ಅನಿಲ್,ಪ್ರದೀಪ್ ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!