Tuesday, September 9, 2025

ಕೊಯನಾಡು ಬಳಿ ಲಾರಿ-ಕಾರು ಭೀಕರ ಅಪಘಾತ :ಸ್ಥಳದಲ್ಲೇ ನಾಲ್ವರ ದುರ್ಮರಣ

ಹೊಸದಿಗಂತ ವರದಿ ಸುಳ್ಯ:

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಯನಾಡು ಸಮೀಪ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಇದೀಗ ಸಂಭವಿಸಿದ ಘಟನೆ ವರದಿಯಾಗಿದೆ.

ನೋದಾವಣಿ ಸಂಖ್ಯೆ ಕೆಎ 05 ಎಂಎಫ್ 5555 ಕಾರಿನಲ್ಲಿ ನಾಲ್ವರು ಗೋಣಿಕೊಪ್ಪ ಮೂಲದ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ನಾಲ್ವರು ಮೃತಪಟ್ಟಿದ್ದು ಇದೀಗ ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದೇಹಗಳನ್ನು ತರಲಾಗಿದ್ದು ಮೃತಪಟ್ಟವರಲ್ಲಿ ನಿಹಾದ್ , ರಿಝ್ವಾನ್ ,ರಾಖಿಬ್ ಎಂದು ತಿಳಿದುಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ