July 1, 2026
Wednesday, July 1, 2026
spot_img

ಜನರಿಗಾಗಿ ಮೈತ್ರಿ ಮಾಡಿಕೊಳ್ಳಲು ಸಿದ್ದ: ಹೊಸ ಪಕ್ಷದ ಹೆಸರು ಘೋಷಿಸಿದ ಶಶಿಕಲಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಅವರು ಶುಕ್ರವಾರ ತಮ್ಮ ನೂತನ ಪಕ್ಷದ ಹೆಸರು ‘ಅಖಿಲ ಭಾರತ ಪುರಚ್ಚಿ ತಲೈವರ್ ಮಕ್ಕಳ್ ಮುನ್ನೇತ್ರ ಕಳಗಂ’ ಎಂದು ಘೋಷಿಸಿದ್ದಾರೆ.

ಫೆಬ್ರವರಿ 24 ರಂದು, ಜೆ ಜಯಲಲಿತಾ ಅವರ ಆಪ್ತ ಸಹಾಯಕಿಯಾಗಿದ್ದ ಶಶಿಕಲಾ ರಾಮನಾಥಪುರಂ ಜಿಲ್ಲೆಯ ಕಮುತಿಯಲ್ಲಿ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದರು.

ಇಂದು ತಮ್ಮ ಹೊಸ ಪಕ್ಷದ ಹೆಸರು ಘೋಷಿಸಿದ್ದು, ಪಕ್ಷದ ಚಿಹ್ನೆ ‘ತೆಂಗಿನ ತೋಟ’ ಆಗಿರುತ್ತದೆ ಮತ್ತು ಇದು ಶ್ರಮಿಕರ ಸಂಕೇತವಾಗಿದೆ ಎಂದು ತಿಳಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯನ್ನು ತಮ್ಮ ಪಕ್ಷವು ಇತರ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಂಡು ಎದುರಿಸಲಿದೆ ಎಂದು ಹೇಳಿದರು.

ಕೆಲವರು ಏಕಾಂಗಿಯಾಗಿ ಸ್ಪರ್ಧಿಸಲು ಬಯಸುತ್ತಾರೆ. ಮೈತ್ರಿ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ನಾವು ಹಾಗಲ್ಲ. ತಮಿಳುನಾಡಿನ ಜನರಿಗೆ ನಾವು ಒಳ್ಳೆಯದನ್ನು ಮಾಡಬೇಕು ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅದಕಾಗಿ ನಾವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !