ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರ್ಷಿಸ್‌ನ ಚಾಕೋಲೆಡ್ ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಸಿರಪ್ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಗಿದೆ. ಸ್ವತಃ ಹರ್ಷಿಸ್ ಕಂಪೆನಿ ವಿಡಿಯೋಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿ ಕ್ಷಮೆಯಾಚಿಸಿದೆ.
ಇತ್ತೀಚೆಗಷ್ಟೇ ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ತುಂಡರಿಸಿದ ಮಾನವನ ಬೆರಳು ಪತ್ತೆಯಾಗಿದ್ದು,ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇದೀಗ ಹರ್ಷಿಸ್ ಚಾಕೊಲೇಟ್ ಸಿರಪ್‌ನ ವಿಡಿಯೋ ಎಲ್ಲೆಡೆ ಸಂಚಲನವನ್ನು ಮೂಡಿಸಿದೆ.
ಕ್ವಿಕ್ ಇ-ಕಾಮರ್ಸ್ ಕಂಪನಿ ಝೆಪ್ಟೊದಿಂದ ಆರ್ಡರ್ ಮಾಡಿದ ಹರ್ಷಿಸ್ ಕಂಪೆನಿಯ ಚಾಕೊಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಕಂಡುಬಂದಿದ್ದು,ಪ್ರಮಿ ಶ್ರೀಧರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ಬಾಟಲಿಯಲ್ಲಿ ಸತ್ತ ಇಲಿ ಇರುವುದು ತಿಳಿಯುವ ಮೊದಲು ಕುಟುಂಬದ ಮೂವರು ಸದಸ್ಯರು ಈ ಸಿರಪ್ ಅನ್ನು ಕುಡಿದಿರುವುದು ತಿಳಿದುಬಂದಿದೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.
View this post on Instagram