Monday, November 24, 2025

ಡಿ.ಕೆ. ಶಿವಕುಮಾರ್ ಗೆ ಚೊಂಬೇ ಗತಿ…ಗಿಳಿ ಹೇಳಿತು ಅಚ್ಚರಿಯ ಭವಿಷ್ಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರಾ ಎಂದು ಬಿಜೆಪಿಯವರು ಗಿಳಿ ಶಾಸ್ತ್ರ ಕೇಳಿದ್ದು, ಗಿಳಿ ಚೊಂಬು ಮತ್ತು ಚಂಡು ಹೂವಿನ ಕಾರ್ಡುಗಳನ್ನು ತೆಗೆಯುವ ಮೂಲಕ ಅಚ್ಚರಿ ಮೂಡಿಸಿದೆ.

ರಾಜ್ಯದಲ್ಲಿ ಪವರ್ ಶೇರಿಂಗ್‌ಗಾಗಿ ಕಾಂಗ್ರೆಸ್ ಪಕ್ಷದೊಳಗೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಕುರ್ಚಿ ಬಿಟ್ಟುಕೊಡಲು ಒಪ್ಪತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಾರೆಂಬ ಆಸೆಕಣ್ಣುಗಳಿಂದ ನೋಡುತ್ತಿದ್ದಾರೆ. ಆದರೆ ಇನ್ನೂ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಲಕ್ಷಣವೇ ಗೋಚರಿಸುತ್ತಿಲ್ಲ.

ಸರ್ಕಾರ ಅಸ್ತಿತ್ವಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಒಪ್ಪಂದಂತೆ ಎರಡೂವರೆ ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆದಿತ್ತು. ಅಂದು ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯವರು ಗಿಳಿಶಾಸ್ತ್ರ ಕೇಳಿಕೊಂಡು ಮುಂದಿನ ಸಿಎಂ ಯಾರಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದ್ದರು.

ಪ್ರಸ್ತುತ ರಾಜ್ಯದಲ್ಲಿ ಪವರ್‌ಶೇರಿಂಗ್‌ಗಾಗಿ ಕಿತ್ತಾಟ ನಡೆಯುತ್ತಿರುವುದನ್ನು ಕಂಡ ಬಿಜೆಪಿ ಕಾರ‌್ಯಕರ್ತರು ನಗರಸಭೆ ಕಚೇರಿ ಮುಂದೆ ಕುಳಿತಿದ್ದ ಗಿಳಿಶಾಸ್ತ್ರದ ವ್ಯಕ್ತಿಯ ಬಳಿ ತೆರಳಿ ಗಿಳಿಶಾಸ್ತ್ರ ಕೇಳಿದ್ದಾರೆ. ಎಂದಿನಂತೆ ಎಲೆ ಅಡಿಕೆ ಮೇಲೆ ಕಾಣಿಕೆ ಹಣ ಇಟ್ಟು ಕರ್ನಾಟಕದ ಸಿಎಂ ಯಾರಾಗುತ್ತಾರೆ, ಯಾರಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಗಿಳಿಶಾಸ್ತ್ರ ಕೇಳಿದ್ದಾರೆ. ಪಂಜರದಲ್ಲಿದ್ದ ಗಿಳಿ ಹೊರಗೆ ಬಂದು ಚೊಂಬು ಮತ್ತು ಚಂಡುಹೂ ಇರುವ ಕಾರ್ಡ್‌ನ್ನು ತೆಗೆದುಕೊಡುವ ಮೂಲಕ ಡಿ.ಕೆ.ಶಿ.ಗೆ. ಚೊಂಬೇ ಗತಿ ಎಂದು ಭವಿಷ್ಯ ನುಡಿದಿದೆ.

error: Content is protected !!