September 25, 2026
Friday, September 25, 2026
spot_img

ಬಿ ರಿಪೋರ್ಟ್ ಗೆ ಲಂಚದ ಡಿಮ್ಯಾಂಡ್: ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್ಐ,ಎಎಸ್ಐ

ಹೊಸ ದಿಗಂತ ವರದಿ, ಚಿಕ್ಕಬಳ್ಳಾಪುರ:

ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಶರಣಪ್ಪ ಮತ್ತು ಎಎಸ್ಐ ವೆಂಕಟೇಶಪ್ಪ ಮಂಗಳವಾರ ಸಂಜೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆ ಮಾಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಇವರು 70 ಸಾವಿರ ಹಣ ಪಡೆಯುವಾಗ ಲೋಕಾ ಬಲೆಗೆ ಸಿಳುಕಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ಮೊಟ್ಲೂರು ಗ್ರಾಮದ ರಘು ಎಂಬಾತನಿಂದ ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Must Read