ಡ್ಯಾನಿಶ್ ಓಪನ್ ಈಜು ಸ್ಪರ್ಧೆ: ಭಾರತದ ಸಜನ್ ಪ್ರಕಾಶ್ ಗೆ ಚಿನ್ನ, ಚಿತ್ರನಟ ಮಾಧವನ್ ಪುತ್ರ ವೇದಾಂತ್ ಗೆ ಬೆಳ್ಳಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಶ್ ಓಪನ್ ಈಜು ಕೂಟದಲ್ಲಿ ಭಾರತದ ಈಜುಗಾರ ಸಜನ್ ಪ್ರಕಾಶ್ ಅವರು ಪುರುಷರ 200 ಮೀಟರ್ ಬಟರ್‌ಫ್ಲೈ ಚಿನ್ನವನ್ನು ಪಡೆದಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸಜನ್​ 200 ಮೀಟರ್​ ಬಟರ್​​ಫೈನಲ್​ಲ್ಲಿ 1 ನಿಮಿಷ 59.27 ಸೆಕೆಂಡ್​ಗಳಲ್ಲಿ ತಲುಪುವ ಮೂಲಕ ಚಿನ್ನದ ಪದಕ ಪಡೆದುಕೊಂಡರು. ಬಹುಭಾಷಾ ನಟ ಆರ್​. ಮಾಧವನ್​ ಮಗ ವೇದಾಂತ್ ಅವರು 1500 ಮೀಟರ್​ ಫ್ರೀಸ್ಟೈಲ್​ನಲ್ಲಿ 2ನೇ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 10 ಮಂದಿಯ ಫೈನಲ್​ ಸುತ್ತಿನಲ್ಲಿ ವೇದಾಂತ್​ 15 ನಿಮಿಷ 57.86 ಸೆಕೆಂಡ್​ಗಳಲ್ಲಿ ತಲುಪಿ 2ನೇ ಸ್ಥಾನ ಪಡದುಕೊಂಡರು.

ಈ ಕುರಿತು ಟ್ವೀಟ್​ ಮಾಡಿರುವ ನಟ ಮಾಧವನ್, ನಿಮ್ಮೆಲ್ಲರ ಆಶೀರ್ವಾದ ಮತ್ತು ದೇವರ ಕೃಪೆ, ಸಜನ್ ಪ್ರಕಾಶ್ ಮತ್ತು ವೇದಾಂತ್​ ಮಾಧವನ್​ಕೋಪನ್‌ಹೇಗನ್‌ನಲ್ಲಿ ನಡೆದ ಡ್ಯಾನಿಸ್ ಓಪನ್​​ನಲ್ಲಿ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ತಂದುಕೊಟ್ಟಿದ್ದಾರೆ. ಕೋಚ್​ ಪ್ರದೀಪ್​ ಅವರಿಗೆ, ಸ್ವಿಮ್ಮಿಂಗ್ ಫೆಡರೇಷನ್​ ಆಫ್ ಇಂಡಿಯಾ ಮತ್ತು ಎಎನ್​ಎಸ್​ಎಗೆ ಧನ್ಯವಾದಗಳು ಎಂದು ಬರೆದುಕೊಂಡು ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!