ದಿನಭವಿಷ್ಯ : ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ನಿಮ್ಮ ವ್ಯವಹಾರಕ್ಕೆ ಉತ್ತಮ

ಮೇಷ
ಯಾವುದೇ ಪ್ರಮುಖ ವ್ಯವಹಾರ ಸಂಬಂಧಿತ ನಿರ್ಧಾರವನ್ನು ತೆಗೆದುಕೊಳ್ಳಬಾರದು. ದಾಂಪತ್ಯ ಸಂಬಂಧಗಳಲ್ಲಿ ಮಧುರತೆ ಇರುತ್ತದೆ.

ವೃಷಭ
ವ್ಯವಹಾರದಲ್ಲಿ ಕೆಲವು ಹೊಸ ಯಶಸ್ಸು ನಿಮಗೆ ಸಿಗಲಿವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ಇರುತ್ತದೆ.

ಮಿಥುನ
ಯಾವುದೇ ಸಮಸ್ಯೆ ಇರಲಿ, ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ. ನಿಮ್ಮ ವ್ಯವಹಾರಕ್ಕೆ ಉತ್ತಮವಾದ ಸಮಯ.

ಕಟಕ
ಕೌಟುಂಬಿಕ ಸಮಸ್ಯೆ ಇದ್ದಲ್ಲಿ ಶಾಂತವಾಗಿ ಅದಕ್ಕೆ ಪರಿಹಾರ ಹುಡುಕಿ. ಮನೆಯಲ್ಲಿ ಸಂತೋಷ ಮತ್ತು ಶಿಸ್ತು ಇರುತ್ತದೆ

ಸಿಂಹ
ಒಂದೆಡೆಯಿಂದ ವೃತ್ತಿಯ ಒತ್ತಡ, ಮತ್ತೊಂದೆಡೆಯಿಂದ ಪ್ರೀತಿಯ ಆಕರ್ಷಣೆ.ಇದು ನಿಮ್ಮ ದಿನವನ್ನು ಮಿಶ್ರಭಾವದಿಂದ ತುಂಬಬಹುದು.

ಕನ್ಯಾ
ವಿವಾಹಿತರ ಮಧ್ಯೆ ಅಭಿಪ್ರಾಯ ಭೇದ ಉಂಟಾದೀತು. ಅದನ್ನು ಕೂಡಲೇ ಶಮನಗೊಳಿಸಲು ಪ್ರಯತ್ನ ಸಾಗಲಿ.ಬಂಧುಗಳ ಸಹಕಾರ.

ತುಲಾ
ಕೆಲವು ವಿಷಯ ನಿಮಗೆ ಪೂರಕವಾಗಿ ಸಾಗದು.ಅದರಿಂದ ಧೃತಿಗೆಡದಿರಿ.ಎಲ್ಲರ ಜತೆ ಉತ್ತಮ ಸಂಪರ್ಕ ಸಾಧಿಸಿರಿ.  ವೃಥಾ ಆರೋಪ ಮಾಡದಿರಿ.

ವೃಶ್ಚಿಕ
ಪ್ರತಿಕೂಲ ಸ್ಥಿತಿಯಲ್ಲೂ ನಿಮ್ಮ ಭಾವನೆ ನಿಯಂತ್ರಿಸಿ. ರೋಷಾವೇಷದಿಂದ ಯಾವುದೇ ಫಲವಿಲ್ಲ. ಹಣದ ವಿಚಾರದಲ್ಲಿ  ಬಿಕ್ಕಟ್ಟು ಸೃಷ್ಟಿ.

ಧನು
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಅನಿಯಂತ್ರಿತ ಆಹಾರ ಸೇವನೆಯಿಂದ ಆರೋಗ್ಯಕೆಟ್ಟೀತು. ವೃತ್ತಿಯಲ್ಲಿ  ವಿರೋಧ ಎದುರಿಸುವಿರಿ.

ಮಕರ
ನಿಮ್ಮ ಕಠಿಣ ನಿಲುವು  ಮನೆಯ ಸೌಹಾರ್ದ ವಾತಾವರಣ ಕೆಡಿಸಬಹುದು.ಕೆಲವು ವಿಷಯಗಳಲ್ಲಿ ನಿಮ್ಮ ನಿಲುವು ಸಡಿಲಿಸುವುದು ಒಳ್ಳೆಯದು.

ಕುಂಭ
ಮನೆಯ ಸಮಸ್ಯೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರದಂತೆ ನೋಡಿಕೊಳ್ಳಿ.ಕೆಲವು ವಿಷಯಗಳು ನಿಮ್ಮ ಮನಶ್ಯಾಂತಿ ಹಾಳು ಮಾಡುತ್ತವೆ.

ಮೀನ
ಇತರರಿಗೆ ನೆರವಿನ ಹಸ್ತ ಚಾಚುವಿರಿ. ನಿಮ್ಮ ಚಿಂತನೆಯಲ್ಲಿ ಬದಲಾವಣೆ ಆದೀತು. ಅದರಿಂದ ನಿಮಗೇ ಆಂತರಿಕ ತೃಪ್ತಿ ದೊರಕುವುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!