ದಿನಭವಿಷ್ಯ | ಇಂದು ವಾದ-ವಿವಾದ ಗಳಿಂದ ದೂರವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಕಣ್ಣು ಕಿವಿ ತೆರೆದಿಡಿ. ಸುತ್ತಲಿನ ಬೆಳವಣಿಗೆಯನ್ನು ಸರಿಯಾಗಿ ಗಮನಿಸಿ. ಅವು ನಿಮ್ಮ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ವೃಷಭ
ಇಂದು ವಾದವಿವಾದ ಗಳಿಂದ ದೂರವಿರಿ. ಏಕೆಂದರೆ ಅದರಲ್ಲಿ ನೀವು ಗೆಲ್ಲಲಾರಿರಿ. ಸಂಘರ್ಷದಿಂದ ದೂರ ಇರುವುದರಲ್ಲೇ ನಿಮ್ಮ ಹಿತವಡಗಿದೆ.

ಮಿಥುನ
ದಿನವಿಡೀ ಕಳೆಗುಂದಿದ ಮನಸ್ಥಿತಿ. ಉಲ್ಲಾಸ ಪಡುವ ವಿಷಯಗಳಿದ್ದರೂ ಮನಸ್ಸೇಕೋ ಅದಕ್ಕೆ ಸರಿಹೊಂದದು. ಆರ್ಥಿಕ ಒತ್ತಡ.

ಕಟಕ
ಸಾಮಾಜಿಕ ಕಾರ್ಯ ಗಳು ಹೆಚ್ಚು. ಕೆಲವು ಅಡ್ಡಿಗಳು ಒದಗಿದರೂ ಅದರಿಂದ ನಿಮ್ಮ ಕಾರ್ಯಕ್ಕೆ ಬಾಧೆಯಾಗದು. ಕೌಟುಂಬಿಕ ಅಸಹನೆ.

ಸಿಂಹ
ಸಂಬಂಧಗಳ ಮೇಲೆ ಪರಿಣಾಮ ಬೀರಬಲ್ಲ ಬೆಳವಣಿಗೆ ಸಂಭವಿಸೀತು. ಹೊಸ ವಿಚಾರ ತಿಳಿದು ಬರಬಹುದು. ದುಡುಕಿ ನಿಂದ ವರ್ತಿಸದಿರಿ.

ಕನ್ಯಾ
ಕೆಲವೊಮ್ಮೆ ಒತ್ತಡಗಳೂ ಒಳ್ಳೆಯದೆ. ಅದರಿಂದಾಗಿ ಉತ್ತಮ ಕೆಲಸಗಳು ಹೊರಹೊಮ್ಮುತ್ತವೆ. ಇದು ಇಂದು ನಿಮ್ಮ ಪಾಲಿಗೆ ಅನ್ವಯ.

ತುಲಾ
ಭಾವುಕರಾಗಿ ಇಂದು ವರ್ತಿಸುವಿರಿ. ಪ್ರಮುಖ ವಿಷಯದಲ್ಲಿ ತೆಗೆದುಕೊಳ್ಳುವ ಭಾವನಾತ್ಮಕ ನಿರ್ಧಾರ ಒಳಿತು ತರಲಾರದು. ದುಡುಕದಿರಿ.

ವೃಶ್ಚಿಕ
ಮುಂಜಾನೆಯ ಅವಧಿ ಸಮಸ್ಯೆಗಳ ಪರಿಹಾರದಲ್ಲೇ ಕಾಲ ಹರಣ. ಅಪರಾಹ್ನ ಎಲ್ಲವೂ ನಿರಾಳವಾಗಿ ಸಮಾಧಾನ. ಮನಸ್ಸು ನಿರಾಳ.

ಧನು
ನಿಮ್ಮ ಮನೋಸ್ಥಿತಿ ಇಂದು ಪದೇಪದೇ ಬದಲಾಗಬಹುದು. ಸಣ್ಣ ವಿಷಯಗಳೂ ಭಾವೋದ್ವಿಗ್ನತೆ ಸೃಷ್ಟಿಸ
ಬಹುದು. ಸಂಯಮ ಕಾಯ್ದುಕೊಳ್ಳಿ.

ಮಕರ
ನಿಮ್ಮ ಕೋರಿಕೆ ಈಡೇರಿಸಿಕೊಳ್ಳಲು ಇಂದು ಹಣವನ್ನು ಸಾಕಷ್ಟು ವ್ಯಯಿಸ ಬೇಕಾಗುತ್ತದೆ. ಆದರೂ ಅಂತಿಮವಾಗಿ ತೃಪ್ತಿ ಹೊಂದುವಿರಿ.

ಕುಂಭ
ನಿಮ್ಮ ಕೆಲಸದ ಕುರಿತಂತೆ ಇತರರಿಂದ ಟೀಕೆ. ಅದರಿಂದ ಖಿನ್ನರಾಗದಿರಿ.  ಎಲ್ಲರನ್ನು ಮೆಚ್ಚಿಸು ವುದು ಸಾಧ್ಯವಿಲ್ಲ ಎಂಬುದು ಅರಿಯಿರಿ.

ಮೀನ
ನೀವು ಇತರರ ಮನಸ್ಸನ್ನು ಅರಿವಲ್ಲಿ ನಿಷ್ಣಾತರು. ಹಾಗಾಗಿ ಎಲ್ಲರೂ ನಿಮ್ಮಲ್ಲಿ ವಿಶ್ವಾಸ ತೋರುತ್ತಾರೆ. ಇತರರ ಸಮಸ್ಯೆ ಪರಿಹರಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!