ಮೇಷ.
ಎಚ್ಚರದಿಂದ ಕಾರ್ಯ ನಿರ್ವಹಿಸಿ. ಕೆಲವು ವಿಷಯಗಳು ಭಾವೋದ್ವಿಗ್ನತೆ ಉಂಟು ಮಾಡೀತು. ಆಪ್ತ ಸಂಬಂಧದಲ್ಲಿ ತೊಡಕು.
ವೃಷಭ
ಎಂದಿನಂತಲ್ಲ ಈ ದಿನ. ಕೌಟುಂಬಿಕ ವಿಚಾರದಲ್ಲಿ ಭಾವಾವೇಶ. ಪ್ರಸಕ್ತ ಪರಿಸ್ಥಿತಿಗೆ ಹೊಂದಿಕೊಳ್ಳಿ. ಅನಿರೀಕ್ಷಿತ ಧನಪ್ರಾಪ್ತಿ ಸಂಭವ.
ಮಿಥುನ
ಕಾರ್ಯ ಸ-ಲತೆ. ಆದರೆ ನಿಮಗೆ ತೃಪ್ತಿಯಿಲ್ಲ. ಏನೋ ಕೊರಗು. ವೃತ್ತಿಯಲ್ಲಿ ಮೆಚ್ಚುಗೆ ಪ್ರಾಪ್ತಿ. ಬಂಧುತ್ವದಲ್ಲಿ ಅಪಸ್ವರ ಕೇಳಬಹುದು.
ಕಟಕ
ಏನೋ ಗೊಂದಲ. ಅಭದ್ರತೆಯ ಭಾವನೆ. ಕಚೇರಿ ಅಥವಾ ಮನೆಯಲ್ಲಿ ವಾಗ್ವಾದಕ್ಕೆ ಇಳಿಯಬೇಡಿ. ಹೊಸ ಸ್ನೇಹಿತರ ಭೇಟಿ.
ಸಿಂಹ
ಹೆಚ್ಚು ಚಿಂತೆ, ಹೊರೆ. ನಿಮ್ಮ ಹಿತಾಸಕ್ತಿ ಕಾಯಲು ಆದ್ಯತೆ ಕೊಡಿ. ಕಾರ್ಯದಲ್ಲಿ ತೊಡಕು.ಸಂವಹನದಲ್ಲಿ ನಿಮ್ಮ ಅಭಿಪ್ರಾಯ ಹೇರದಿರಿ.
ಕನ್ಯಾ
ಸವಾಲಿನ ದಿನ. ತಾಳ್ಮೆ ಅತೀ ಅಗತ್ಯ. ಪ್ರತಿಕೂಲ ಸನ್ನಿವೇಶವನ್ನು ಜಾಣ್ಮೆಯಿಂದ ನಿಭಾಯಿಸಿ. ಆರೋಗ್ಯಪೂರ್ಣ ಆಹಾರವಷ್ಟೆ ಸೇವಿಸಿ.
ತುಲಾ
ಯಾವುದೇ ಕಾರ್ಯ ಯೋಜಿಸಿ ಮಾಡಿ. ಇಂದು ಪ್ರಯಾಣ ಹೆಚ್ಚು. ವ್ಯವಹಾರದ ಮಧ್ಯೆಯೂ ಆಧ್ಮಾತ್ಮಿಕ ಒಲವು ಹೆಚ್ಚಬಹುದು.
ವೃಶ್ಚಿಕ
ನಿಮ್ಮ ಶ್ರಮಕ್ಕೆ ಉತ್ತಮ ಪ್ರತಿಫಲ ಲಭ್ಯ. ಶ್ಲಾಘನೆ ಪ್ರಾಪ್ತಿ. ಮನೆಯಲ್ಲಿ ಹೆಚ್ಚು ಭಾವಾವೇಶ ತೋರದಿರಿ. ಸಂಘರ್ಷ ಮನೋಭಾವ ತ್ಯಜಿಸಿ.
ಧನು
ಈ ದಿನ ಸಾಧಾರಣ ಫಲ. ಆರ್ಥಿವಾಗಿ ಹಿನ್ನಡೆ. ನಿಮ್ಮ ಅಭಿಪ್ರಾಯ ಇತರರ ಮೇಲೆ ಹೇರದಿರಿ. ಅದರಿಂದ ಸಂಘರ್ಷ ಸಂಭವ. ಆರೋಗ್ಯ ಸ್ಥಿರ.
ಮಕರ
ಪ್ರಗತಿಯ ಹಾದಿ ಕಾಣುವಿರಿ. ಹೊಸ ಯೋಜನೆ ಫಲ ನೀಡಲಿದೆ. ಆರ್ಥಿಕ ಸ್ಥಿತಿ ತೃಪ್ತಿಕರ. ಹಣದ ವಿಚಾರದಲ್ಲಿ ಕುರುಡಾಗಿ ನಂಬದಿರಿ.
ಕುಂಭ
ಕಾರ್ಯ ಸಾಧನೆಗೆ ಅಡ್ಡಿಗಳು. ಸಂವಹನದ ಕೊರತೆಯಿಂದ ಮನಸ್ತಾಪ. ಕುಟುಂಬಸ್ಥರ ಜತೆ ಸಮಾಧಾನದಿಂದ ವ್ಯವಹರಿಸಿ.
ಮೀನ
ವೃತ್ತಿಯಲ್ಲಿ ನಿಮ್ಮ ಮೇಲಿನವರ ಒತ್ತಡ. ಸಂಗಾತಿ ಜತೆಗಿನ ಭಿನ್ನಮತ ಪರಿಹಾರ. ಹೊಸ ವ್ಯವಹಾರದಲ್ಲಿ ಹಣ ಹೂಡಿಕೆಯಿಂದ ಲಾಭ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ