Wednesday, January 14, 2026
Wednesday, January 14, 2026
spot_img

ದಿನಭವಿಷ್ಯ: ಯಾವುದೇ ಸಂಬಂಧದಿಂದ ಹೊರಬರುವ ಹಾಗಿದ್ದರೆ ವಿನಯದಿಂದ ಕೆಲಸ ಮುಗಿಸಿ

ಮೇಷ
ಹೊಸ ವ್ಯವಹಾರ ತಕ್ಷಣಕ್ಕೆ ಕೈ ಹಿಡಿಯದು. ಹಳೆಯದನ್ನೆ ಉತ್ತಮ ಪಡಿಸಲು ಯೋಜಿಸಿ. ವಿರೋಧ ಕಟ್ಟಿಕೊಳ್ಳದೆ ಸಹಕಾರ ಪಡೆಯಿರಿ.
ವೃಷಭ
ಹಳೆಯ ತಪ್ಪು ಸರಿಪಡಿಸುವುದು ಒಳಿತು. ಅದನ್ನೆ ಸಮರ್ಥಿಸಬೇಡಿ. ಆಪ್ತರಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ಮನಸಿನ ಹೊರೆ ಕಡಿಮೆಯಾಗಲಿದೆ.
ಮಿಥುನ
ಎಂದಿನಂತೆ ಸಹಜ ದಿನ. ವಿಶೇಷ ಘಟಿಸದು. ಕುಟುಂಬದ ಜತೆ ಹೊರಗೆ ತಿರುಗಾಡಿ, ಆನಂದಿಸಿ. ಏಕತಾನತೆಯ ಬದುಕಿಂದ  ಹೊರಬನ್ನಿ.
ಕಟಕ
ಇತರರ ಏಳಿಗೆಗೆ ದುಡಿಯುತ್ತಾ ನಿಮ್ಮ ಹಿತಾಸಕ್ತಿ ಮರೆಯದಿರಿ. ಕೆರಿಯರ್ ಉನ್ನತಿಯ ಹೊಸ ಅವಕಾಶ ಸಿಗಲಿದೆ. ಆಪ್ತರ ಜತೆ ಆನಂದಕೂಟ.
ಸಿಂಹ
ವೃತ್ತಿಯಲ್ಲಿ ಪ್ರಗತಿ. ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ. ಪ್ರೇಮದ ಅಹವಾಲು ಫಲಿಸದು, ಈ ವಿಚಾರದಲ್ಲಿ ವಿವೇಕದಿಂದ ವರ್ತಿಸುವುದೊಳಿತು.
ಕನ್ಯಾ
ನಿಮ್ಮ ಮಾತೇ ನಿಮಗೆ ಬಂಡವಾಳ. ನಿಮ್ಮ ಪ್ರಗತಿ ಸಾಧಿಸುವಿರಿ. ಮಿತ್ರರನ್ನೂ ಗಳಿಸುವಿರಿ. ಆದರೆ ಕೆಲವರ ಜತೆ ವಾಗ್ವಾದದಿಂದ ದೂರವಿರಿ.
ತುಲಾ
ನಿಮ್ಮ ಕೆಲಸಕ್ಕೆ ಗಮನ ಕೊಡಿ. ಸಡಿಲ ಮಾತು ಬೇಡ. ನಿಮ್ಮ ಇಷ್ಟದ ಸಂಗೀತ ಕೇಳುವುದರಿಂದ ಒತ್ತಡ ಕಡಿಮೆಯಾದೀತು.  ವ್ಯವಹಾರ ಉತ್ತಮ.
ವೃಶ್ಚಿಕ
ಸಂಬಂಧದಿಂದ ಹೊರಬರಲು ಇಚ್ಛಿಸಿದ್ದರೆ ಅದನ್ನು ವಿನಯದಿಂದ ಮಾಡಿ. ಇನ್ನೊಬ್ಬರ ಮನಸ್ಸು ನೋಯಿಸಬೇಡಿ. ಸ್ನೇಹಿತರಿಂದ ಧನಗಳಿಕೆ.
ಧನು
ವೃತ್ತಿ ಒತ್ತಡ ನಿಮ್ಮನ್ನು ಬಸವಳಿಸುವುದು. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು. ಹೊಸ ವ್ಯವಹಾರದಲ್ಲಿ ಹಣ ಹೂಡಲು ಸಕಾಲ.
ಮಕರ
ವೃತ್ತಿಯಲ್ಲಿ ಉನ್ನತಿ ಕಾಣುವ ಹೊಸ ಅವಕಾಶ ತೆರೆಯಲಿದೆ. ಸಣ್ಣಪುಟ್ಟ ಗಾಯವಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಿ. ಧನವ್ಯಯ ಅಽಕ.
ಕುಂಭ
ನಿಮ್ಮ ಮೇಲೆ ವಿಶ್ವಾಸವಿಡಿ. ನಿಮ್ಮ ಆಕಾಂಕ್ಷೆ ಈಡೇರಲಿದೆ. ವ್ಯಕ್ತಿಯೊಬ್ಬರ ಜತೆ ಭಾವನಾತ್ಮಕ ಸಂಬಂಧ. ನೋವು, ನಿರಾಶೆ ಸಂಭವ.
ಮೀನ
ಹಲವಾರು ಕೆಲಸದ ಒತ್ತಡ. ಆಪ್ತರ ಜತೆ ಭಿನ್ನಮತ ಸಂಭವ.  ಹೊಟ್ಟೆ ಸಂಬಂಧ ಅಸ್ವಸ್ಥತೆ ಕಾಡಬಹುದು. ಸರಿಯಾದ ಆಹಾರ ಸೇವಿಸಿರಿ.

Most Read

error: Content is protected !!