ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಳಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯಲ್ಲಿ ಮೆಟ್ರೋ ರೈಲು ನಿಲ್ದಾಣಗಳು ಸಾಮಾನ್ಯ ರೈಲು ನಿಲ್ದಾಣಗಳಷ್ಟೇ ತುಂಬಿತುಳುಕುತ್ತಿರುತ್ತವೆ. ಮಹಿಳೆ ಇಳಿಯುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿದ ಕಾರಣ ಆಕೆಯ ಸೀರೆ ಹಾಗೂ ಜಾಕೆಟ್ ಬಾಗಿಲು ನಡುವೆ ಸಿಲುಕಿತ್ತು.ಪ್ರಯಾಣಿಕರು ಕೂಗುತ್ತಿದ್ದಂತೆಯೇ ಮೆಟ್ರೋ ಹೊರಟುಬಿಟ್ಟಿತ್ತು, ರೈಲು ಪ್ಲಾಟ್ಫಾರಂನಿಂದ ಮುಂದೆ ಸಾಗಿದ ನಂತರ ಮಹಿಳೆ ಪ್ಲಾಟ್ಫಾರಂನ ಕೊನೆಯ ಗೇಟ್ಗೆ ಡಿಕ್ಕಿ ಹೊಡೆದು ಟ್ರ್ಯಾಕ್ ಮೇಲೆ ಬಿದ್ದಿದ್ದಾರೆ.
ಸಂತ್ರಸ್ತ ಮಹಿಳಾ ಪ್ರಯಾಣಿಕರನ್ನು 35 ವರ್ಷದ ರೀನಾ ಎಂದು ಗುರುತಿಸಲಾಗಿದೆ.
.