ಧರ್ಮ, ಪ್ರೇಮ , ಸಮರ್ಪಣೆಯ ಅದ್ವಿತೀಯ ಕಥೆ: ‘ರಾಮಾಯಣ’ ಪ್ರಸಾರದ ದಿನಾಂಕ ಘೋಷಿಸಿದ ಡಿಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಜನಮನ ಗೆದ್ದಿದ್ದ ರಮಾನಂದ್‌ ಸಾಗರ್‌ ಅವರ ನಿರ್ದೇಶನದ ರಾಮಾಯಣವನ್ನು ಮತ್ತೆ ಪ್ರಸಾರ ಮಾಡುವುದಾಗಿ ರಾಷ್ಟ್ರೀಯ ವಾಹಿನಿ ಡಿಡಿ ನ್ಯಾಷನಲ್‌ ಘೋಷಣೆ ಮಾಡಿತ್ತು. ಅದರಂತೆ ಈ ಧಾರಾವಾಹಿಯ ಪ್ರಸಾರದ ದಿನಾಂಕ ಹಾಗೂ ಸಮಯವನ್ನು ಡಿಡಿ ಪ್ರಕಟಿಸಿದೆ.

ಈ ಮೆಗಾ ಸೀರಿಯಲ್‌ನಲ್ಲಿ ರಾಮನಾಗಿ ನಟಿಸಿದ್ದ ಅರುಣ್‌ ಗೋವಿಲ್‌, ಸೀತೆಯಾಗಿ ನಟಿಸಿದ್ದ ದೀಪಿಕಾ ಚಿಕಾಲಿಯಾ ಹಾಗೂ ಲಕ್ಷ್ಮಣ ಪಾತ್ರದಲ್ಲಿ ನಟಿಸಿದ್ದ ಸುನೀಲ್‌ ಲೆಹ್ರಿ ಅವರನ್ನು ಇಂದಿಗೂ ದೇಶದ ಜನತೆ ರಾಮ, ಸೀತೆ, ಲಕ್ಷ್ಮಣರೆಂದೇ ಗುರುತಿಸುತ್ತಾರೆ.

ಜನವರಿ 22 ರಂದು ನಡೆದ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲೂ ಕೂಡ ಈ ಮೂವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಆ ಸಮಯದಲ್ಲಿ ಅಯೋಧ್ಯೆಗೆ ಹೋಗಿದ್ದ ಇವರನ್ನು ಸ್ಥಳೀಯ ಜನ ಖುಷಿಯಿಂದಲೇ ಸ್ವಾಗತಿಸಿದ್ದರು.

ಇದೀಗ ಸೀರಿಯಲ್‌ ಅನ್ನು ಮರು ಪ್ರಸಾರ ಮಾಡುವುದಾಗಿ ಡಿಡಿ ನ್ಯಾಷನಲ್‌ ಘೋಷಣೆ ಮಾಡಿದೆ.ಅದರಂತೆ ಡಿಡಿ ನ್ಯಾಷನಲ್‌ ಟ್ವೀಟ್‌ ಮಾಡಿದ್ದು, ‘ಧರ್ಮ, ಪ್ರೇಮ ಹಾಗೂ ಸಮರ್ಪಣೆಯ ಅದ್ವಿತೀಯ ಕಥೆ..ಇಡೀ ದೇಶವೇ ಮೆಚ್ಚಿದ ಶೋ ರಾಮಾಯಣ ಮತ್ತೊಮ್ಮೆ ಪ್ರಸಾರವಾಗುತ್ತಿದೆ. ಫೆಬ್ರವರಿ 5 ರಿಂದ ನೀವು ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುಪ್ರಸಾರವನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ವೀಕ್ಷಣೆ ಮಾಡಬಹುದು’ ಎಂದು ಟ್ವೀಟ್‌ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!