Saturday, October 11, 2025

ನಮ್ಮ ಮನೆ ವಿಡಿಯೋ ಯಾಕೆ ಶೇರ್‌ ಆಗ್ತಿದೆ? ಇದು ಸ್ವಲ್ಪವೂ ಇಷ್ಟವಾಗ್ತಿಲ್ಲ : ಗರಂ ಆದ ಆಲಿಯಾ ಭಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಆಲಿಯಾ ಭಟ್‌ ಹಾಗೂ ನಟ ರಣ್‌ಬೀರ್‌ ಕಪೂರ್‌ ಹೊಸ ಮನೆಯೊಂದನ್ನು ನಿರ್ಮಾಣ ಮಾಡ್ತಿದ್ದಾರೆ. ಹೊಸ ಮನೆಯ ಫೋಟೊ ಹಾಗೂ ವಿಡಿಯೋಗಳು ಎಲ್ಲೆಡೆ ಶೇರ್‌ ಆಗಿದೆ. ಇದು ಆಲಿಯಾ ಕುಟುಂಬಕ್ಕೆ ಸಿಟ್ಟು ತರಿಸಿದೆ.

ಮುಂಬೈನಲ್ಲಿ ಅಕ್ಕಪಕ್ಕ ಅಂಟಿಕೊಳ್ಳುವಂತೆ ಮನೆಗಳು ಇರುತ್ತವೆ. ಆದರೆ ಕಾಣಿಸುತ್ತಿದೆ ಎಂದ ಮಾತ್ರಕ್ಕೆ ಮನೆಯ ವಿಡಿಯೋ, ಫೋಟೊ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡೋದು ಎಷ್ಟು ಸರಿ? ನಿಮ್ಮ ಮನೆಯಲ್ಲಿ ನಿಮ್ಮದೇ ವಿಡಿಯೋವನ್ನು ಜನ ಮಾಡೋಕೆ ಶುರು ಮಾಡಿದ್ರೆ ಕೋಪ ಬರೋದಿಲ್ವಾ? ಜನರ ಪ್ರೈವೆಸಿಗೆ ಬೆಲೆ ಕೊಡಿ ಎಂದು ಆಲಿಯಾ ಪೋಸ್ಟ್‌ ಮಾಡಿದ್ದಾರೆ.

View this post on Instagram

A post shared by Alia Bhatt 💛 (@aliaabhatt)

error: Content is protected !!