October 10, 2026
Saturday, October 10, 2026
spot_img

‘ಕೆಡಿ’ ಸಾಂಗ್ ವಿವಾದ: ಅಭಿಮಾನಿಗಳ ಮುಂದೆ ಕ್ಷಮೆಯಾಚಿಸಿದ ನಿರ್ದೇಶಕ ಜೋಗಿ ಪ್ರೇಮ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಸಾರಥ್ಯದಲ್ಲಿ ತೆರೆ ಮೇಲೆ ಬರಲು ಸಜ್ಜಾದ ‘ಕೆಡಿ’ ಸಿನಿಮಾಗೆ ದೊಡ್ಡ ಹೊಡೆತ ಬಿದ್ದಿದ್ದು, ಇದಕ್ಕೆ ಕಾರಣ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು . ಇದರ ಬೆನ್ನಿಗೆ ನಿರ್ದೇಶಕ ಪ್ರೇಮ್ ಅಭಿಮಾನಿಗಳ ಮುಂದೆ ಕ್ಷಮೆಯಾಚಿಸಿದ್ದಾರೆ.

ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡು ಎಲ್ಲೆಡೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪ್ರೇಮ್, ಯಾರು ಕೂಡ ಬೇಕು ಅಂತ ತಪ್ಪು ಮಾಡಲ್ಲ. ಇಲ್ಲಿವರೆಗೆ ನಾನಾ ರೀತಿಯ ಹಾಡುಗಳನ್ನು ನೀಡಿದ್ದೇನೆ. ಅವುಗಳಿಗೆ ನೀವು ಸದಾ ಬೆಂಬಲ ನೀಡಿದ್ದೀರಿ. ಆದರೆ ಈ ಹಾಡಿನಲ್ಲಿ ನಾನು ಬಳಸಿದ್ದ ಪದ ತಪ್ಪಾಗಿರಬಹುದು. ಅಥವಾ ಅರ್ಥ ಮಾಡಿಕೊಂಡಿರುವ ರೀತಿಯಲ್ಲಿ ವ್ಯತ್ಯಾಸ ಇರಬಹುದು. ಆದ್ರೆ ಇಲ್ಲಿ ನಾನು ಯಾರಿಗೂ ನೋವು ಉಂಟು ಮಾಡುವ ಉದ್ದೇಶವಿಲ್ಲ .ಒಂದು ವೇಳೆ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ನಾನು ಮೊದಲು ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಇದೇ ವೇಳೆ ಪ್ರೇಮ್, ನಾನು ಈ ಹಾಡನ್ನು ಇಲ್ಲಿಯೇ ಬಿಟ್ಟುಬಿಡುತ್ತೇನೆ. ಮತ್ತೊಮ್ಮೆ ಹೊಸ ರೀತಿಯಲ್ಲಿ ಹಾಡು ಬರೆದು ಶೂಟಿಂಗ್ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.

Must Read