ನಾಲ್ವರು ರಾಜಕೀಯ ಖೈದಿಗಳನ್ನು ಗಲ್ಲಿಗೇರಿಸಿದ ಮ್ಯಾನ್ಮಾರ್‌ ಸೇನಾಡಳಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕಳೆದ ವರ್ಷ ಮ್ಯಾನ್ಮಾರ್ ದೇಶದ ಸೇನೆಯು ದೇಶವನ್ನು ತನ್ನ ವಶಕ್ಕೆ ಪಡೆದುಕೊಂಡ ಸಂದರ್ಭದಲ್ಲಿ ಹಿಂಸಾತ್ಮಕ ಕೃತ್ಯಕ್ಕೆ ಪ್ರೇರೇಪಿಸಿದ ಹಾಗೂ ಹತ್ಯೆಯ ಆರೋಪ ಹೊತ್ತಿದ್ದ ಮಾಜಿ ಶಾಸಕ, ಪ್ರಜಾಪ್ರಭುತ್ವ ಕಾರ್ಯಕರ್ತ ಸೇರಿದಂತೆ ಒಟ್ಟು ನಾಲ್ವರು ರಾಜಕೀಯ ಕೈದಿಗಳನ್ನು ಮ್ಯಾನ್ಮಾರ್‌ ದೇಶವು ನೇಣಿಗೇರಿಸಿದೆ.
ಸುಮಾರು 50 ವರ್ಷಗಳಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ ಎಂದು ಮ್ಯಾನ್ಮಾರ್ ಸರ್ಕಾರ ದೃಢಪಡಿಸಿದೆ. ನಾಲ್ವರು ಕೈದಿಗಳ ಕ್ಷಮಾದಾನಕ್ಕಾಗಿ ವಿಶ್ವಾದ್ಯಂತ ಮನವಿಗಳು ಕೇಳಿಬಂದ ಹೊರತಾಗಿಯೂ ಮರಣದಂಡನೆಯನ್ನು ಜಾರಿಗೊಳಿಸಲಾಗಿದೆ.
” ಈ ಹತ್ಯೆಗಳು ಮ್ಯಾನ್ಮಾರ್‌ ನಲ್ಲಿ ಈಗಾಗಲೇ ಭೀಕರವಾಗಿರುವ ಮಾನವ ಹಕ್ಕುಗಳ ಸ್ಥಿತಿಗತಿಗಳು ಮತ್ತಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತಿದೆ” ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!