ನೈಜರ್ ದೇಶದಲ್ಲಿ ಶುರುವಾಗಿದೆ ದಂಗೆ: ತಕ್ಷಣ ಭಾರತೀಯರು ದೇಶ ತೊರೆಯುವಂತೆ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಪಬ್ಲಿಕ್ ಆಫ್ ನಿಜರ್‌ನ ಪರಿಸ್ಥಿತಿ ಶೋಚನೀಯವಾಗಿದೆ. ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಬಂಧಿಸಿರುವ ನೈಜರ್ ಸೇನಾ ಪಡೆ ತನ್ನ ವಶದಲ್ಲಿ ಇಟ್ಟುಕೊಂಡಿದೆ.

ಇದರ ಬೆನ್ನಲ್ಲೇ ನೈಜರ್ ಸೇನಾ ಪಡೆಗೆ ಆಫ್ರಿಕನ್ ರಾಷ್ಟ್ರಗಳು ಹಲವು ನಿರ್ಬಂಧ ವಿಧಿಸಿದ್ದು, ದಂಗೆ ಶುರುವಾಗಿದೆ.

ಇದೀಗ ಅಲ್ಲಿನ ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಭಾರತೀಯ ವಿದೇಶಾಂಗ ಇಲಾಖೆ ತನ್ನ ನಾಗರೀಕರಿಗೆ ಮಹತ್ವದ ಸೂಚನೆ ನೀಡಿದ್ದು, ಈಗಾಗಲೇ ನೈಜರ್ ದೇಶದ ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಭಾರತೀಯರು ನೈಜರ್ ದೇಶ ಪ್ರಯಾಣನ್ನು ಮುಂದೂಡವಂತೆ ಸೂಚಿಸಲಾಗಿದೆ.

ಭಾರತ ನೈಜರ್ ದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ನೈಜರ್ ದೇಶದ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿದೆ. ಹೀಗಾಗಿ ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ನೈಜರ್ ದೇಶ ತೊರೆಯಬೇಕು.ಭಾರತೀ ನಾಗರೀಕರ ಸುರಕ್ಷತೆಗಾಗಿ ದೇಶ ತೊರೆಯುವುದು ಸದ್ಯಕ್ಕಿರುವ ಮಾರ್ಗ.ಅದಕ್ಕಾಗಿ ನೈಜರ್ ದೇಶದಲ್ಲಿರುವ ಭಾರತೀಯರ ರಾಯಭಾರ ಕಚೇರಿ ನಿಮಗೆ ನರೆವು ನೀಡಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ಭಾರತೀಯರ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ನಾಗರೀಕರು ಆನ್‌ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಮಾಡಿಕೊಳ್ಳಿ. ನೈಜರ್ ದೇಶಕ್ಕೆ ಪ್ರಯಾಣ ಬೆಳೆಸುವ ಭಾರತೀಯರು ಸದ್ಯಕ್ಕೆ ಮುಂದೂಡುವುದು ಉತ್ತಮ. ಪರಿಸ್ಥಿತಿ ಸುಧಾರಿಸಿದ ಬಳಿಕ ಪ್ರಯಾಣ ಮುಂದುವರಿಸಿ ಎಂದು ಸಲಹೆ ನೀಡಿದ್ದಾರೆ.

ನೈಜರ್ ದೇಶದ ಚುನಾಯಿತ ಸರ್ಕಾರವನ್ನೇ ಸೇನೆ ಪತನಗೊಳಿಸಿದೆ. ಇತ್ತ ನೈಜರ್ ಸೇನಾ ಕಮಾಂಡರ್ ಎಬಿ ಟಿಯಾನಿ ನೀಡಿದ ಘೋಷಣೆ ಆಫ್ರಿಕನ್ ದೇಶಗಳನ್ನು ಮತ್ತಷ್ಟು ಕೆರಳಿಸಿದೆ. ತಾನೇ ನೈಜರ್ ದೇಶದ ಅಧ್ಯಕ್ಷ ಎಂದು ಟಿಯಾನಿ ಘೋಷಣೆ ಮಾಡಿದ್ದಾರೆ. ಇತ್ತ ನೈಜೀರಿಯಾ ಸೇರಿದಂತೆ 15 ಆಫ್ರಿಕನ್ ರಾಷ್ಟ್ರಗಳು ತುರ್ತು ಸಭೆ ನಡೆಸಿದೆ. ವಶದಲ್ಲಿಟ್ಟುಕೊಂಡಿರುವ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ತಕ್ಷಣವೇ ಒಪ್ಪಿಸುವಂತೆ ಸೂಚಿಸಿದೆ.

ಆದರೆ ಯಾವುದೇ ಸೂಚನೆಗೆ ಬಗ್ಗದ ನೈಜರ್ ಸೇನೆ ದಾಳಿ ಆರಂಭಿಸಿದೆ. ನೈಜರ್ ದೇಶದ ಜೊತೆಗಿನ ವಾಣಿಜ್ಯ ಹಾಗೂ ಇತರ ವ್ಯವಹಾರ ಸಂಬಂಧವನ್ನು ಆಫ್ರಿಕನ್ ದೇಶಗಳು ಕಡಿತಗೊಳಿಸಿದೆ. ಬಜೌಮ್ ಅವರನ್ನು ಆಫ್ರಿಕನ್ ಒಕ್ಕೂಟಕ್ಕೆ ಒಪ್ಪಿಸದಿದ್ದರೆ, ದಾಳಿ ನಡೆಸುವುದಾಗಿ ಆಫ್ರಿಕನ್ ಒಕ್ಕೂಟ ಎಚ್ಚರಿಕೆ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!