Wednesday, September 3, 2025

ಪದೇ ಪದೇ ಟೀ ಬಿಸಿ ಮಾಡಿ ಕುಡಿಯುವ ಅಭ್ಯಾಸ ನಿಮಗಿದ್ಯಾ? ಇದ್ರಿಂದ ಏನ್ ಸಮಸ್ಯೆ ಆಗುತ್ತೆ ಗೊತ್ತ?

ಕೆಲಸದ ಒತ್ತಡ, ಸುಸ್ತು, ತಲೆಬಿಸಿ ಎಲ್ಲವಕ್ಕೂ ಪರಿಹಾರವೆನಿಸುವುದೆ ಒಂದು ಬಿಸಿ ಕಪ್ ಟೀ. ಆದರೆ, ಅದೇ ಟೀಯನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯುವ ಅಭ್ಯಾಸ ನೀವು ಹೊಂದಿದ್ದರೆ, ಎಚ್ಚರಿಕೆಯಿಂದಿರಿ. ಈ ಅಭ್ಯಾಸದಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಟೀ ಪದೇ

ಬ್ಯಾಕ್ಟೀರಿಯಾ ಅಭಿವೃದ್ಧಿಗೆ ಅವಕಾಶ:
ಚಹಾವನ್ನು 4 ಗಂಟೆಗಳಿಗೂ ಹೆಚ್ಚು ಕಾಲ ಇಟ್ಟು ನಂತರ ಮತ್ತೆ ಬಿಸಿ ಮಾಡಿದರೆ, ಅದರಲ್ಲಿ ಶಿಲೀಂಧ್ರಗಳು ರೂಪುಗೊಳ್ಳಬಹುದು. ಇದರಿಂದ ಬ್ಯಾಕ್ಟೀರಿಯಾದಂತಹ ಹಾನಿಕಾರಕ ಸೂಕ್ಷ್ಮಜೀವಿಗಳು ವೃದ್ಧಿಯಾಗುತ್ತವೆ. ಇಂತಹ ಟೀ ಕುಡಿದರೆ ಹೊಟ್ಟೆ ನೋವು, ವಾಂತಿ ಅಥವಾ ಅತಿಸಾರ ಮುಂತಾದ ಜೀರ್ಣಕ್ರಿಯಾ ಸಮಸ್ಯೆಗಳಿಗೆ ಕಾರಣವಾಗಬಹುದು.

ಪೋಷಕಾಂಶಗಳ ನಾಶ:
ಹರ್ಬಲ್ ಟೀ ಅಥವಾ ಗ್ರೀನ್ ಟೀ ಪ್ರಕಾರದ ಚಹಾಗಳನ್ನು ಎರಡನೇ ಬಾರಿ ಬಿಸಿ ಮಾಡಿದರೆ, ಅದರಲ್ಲಿರುವ ವಿಟಮಿನ್‌ಗಳು, ಖನಿಜಗಳು ನಾಶವಾಗುತ್ತವೆ. ಇದರಿಂದ ಟೀ ಸೇವನೆಯಿಂದ ದೊರೆಯಬೇಕಾದ ಲಾಭಗಳು ಕಳೆದುಹೋಗುತ್ತವೆ. ಜೊತೆಗೆ ದೇಹದಲ್ಲಿ ಹೊಟ್ಟೆಯುಬ್ಬರ, ವಾಕರಿಕೆ ಉಂಟಾಗುವ ಸಂಭವವಿದೆ.

ಟೀ ರುಚಿಯ ಕಳೆದುಕೊಳ್ಳುತ್ತದೆ:
ಚಹಾವನ್ನು ಹಾಲಿನೊಂದಿಗೆ ಬಿಸಿ ಮಾಡಿದರೆ, ಅದು 41°F ರಿಂದ 140°F ನಡುವಿನ ತಾಪಮಾನದಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಇದು ಟೀಯ ರುಚಿಯನ್ನು ಬದಲಾಯಿಸುತ್ತದೆ.

ಇದನ್ನೂ ಓದಿ