ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಸಾವಿನ ವದಂತಿ: ಆರೋಗ್ಯ ಸ್ಥಿತಿ ಗಂಭೀರ ಎಂದ ಕುಂಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಸಾವಿನ ವದಂತಿಗಳ ನಡುವೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ವೆಂಟಿಲೇಷನ್ʼನಲ್ಲಿದ್ದಾರೆ ಎಂದು ಅವರ ಕುಟುಂಬ ಶುಕ್ರವಾರ ಹೇಳಿದೆ.
ಮುಷರ್ರಫ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾದ ಸಂದೇಶದಲ್ಲಿ, ಈ ಕುರಿತು ಸ್ಪಷ್ಟನೆ ನೀಡಿರುವ ಕುಟುಂಬ, ಮುಷರಫ್​ ಕಳೆದ ಮೂರು ವಾರಗಳಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅಂಗಾಂಗಗಳು ಕೆಲಸ ಮಾಡುತ್ತಿಲ್ಲ ಹಾಗೂ ವಾಸಿಯಾಗದಷ್ಟು ಕಠಿಣ ಪರಿಸ್ಥಿತಿಯಲ್ಲಿ ಇದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದ ಮುಷರಫ್‌ 2001ರಿಂದ 2008ರವರೆಗೆ ದೇಶದ ಅಧ್ಯಕ್ಷರೂ ಆಗಿದ್ದರು. 2007ರಲ್ಲಿ ಪಾಕಿಸ್ತಾನದ ಸಂವಿಧಾನವನ್ನು ಅಮಾನತು ಮಾಡಿದ ಹಿನ್ನೆಲೆಯಲ್ಲಿ ದೇಶದ್ರೋಹದ ಗಂಭೀರ ಪ್ರಕರಣ ಎದುರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here