ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಟ್ನಾದ ಫತುಹಾ ಪ್ರದೇಶದ ರೈಲ್ವೆ ನಿಲ್ದಾಣದಿಂದ 22 ವರ್ಷದ ಮಹಿಳೆಯನ್ನು ಇಬ್ಬರು ಪುರುಷರು ಬಂದೂಕು ತೋರಿಸಿ ಅಪಹರಿಸಿದ್ದು, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳವಾರ ರೈಲಿಗಾಗಿ ಕಾಯುತ್ತಾ ಫತುಹಾ ರೈಲು ನಿಲ್ದಾಣದಲ್ಲಿ ನಿಂತಿದ್ದೆ. ಆಗ ಆರೋಪಿ ಬಂದೂಕು ತೋರಿಸಿ ಆಕೆಯನ್ನು ಬಲವಂತವಾಗಿ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮಹಿಳೆಗೆ ಅತ್ಯಾಚಾರ ಎಸಗಿದ ಇಬ್ಬರಿಗೆ ಪರಿಚಯವಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಇತರ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದರು.