ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ ಬಾಸ್ ಸೀಸನ್ 9 ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ನಡುವೆ ವೈಲ್ಡ್ ಕಾರ್ಡ್ ಎಂಟ್ರಿ ಕುರಿತು ದಿನೇ ದಿನೇ ಜೋರಾಗುತ್ತಿದೆ.
ಈಗಾಗಲೇ ಓಟಿಟಿಯಲ್ಲಿದ್ದ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇನ್ನು ಪ್ರವೇಶ ಪಡೆದಿಲ್ಲ.
ಆ ಬಳಿಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತು. ಆದರೆ, ಈವರೆಗೂ ಕೂಡ ಎಂಟ್ರಿ ಪಡೆದಿಲ್ಲ.
ಹಾಗಾಗಿ ಯಾರು ಹೋಗ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದರ ನಡುವೆ ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಕೂಡ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ಹಾಗಾಗಿ ಮತ್ತೆ ಹೋಗ್ತಾರಾ ಎಂಬ ನಿರೀಕ್ಷೆ ಹುಟ್ಟಿದೆ.
ಇತ್ತ ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ. ಹಾಗಾಗಿ ಇದಕ್ಕೆ ಪುಷ್ಟಿ ನೀಡಿದಂತಾಗಿದೆ.