ಬೆಂಗಳೂರು ಪೊಲೀಸರ ಸಹಾಯವಾಣಿ ಹ್ಯಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ರಾಜಧಾನಿ ಬೆಂಗಳೂರಿನ ಜನತೆ ತುರ್ತು ಪೊಲೀಸರನ್ನು ಸಂಪರ್ಕ ಮಾಡಲು ಬಳಸುತ್ತಿದ್ದ 112 ಸಹಾಯವಾಣಿ ಸಂಖ್ಯೆಯನ್ನು ಹ್ಯಾಕ್‌ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬದಲಿ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ.

ಬೆಂಗಳೂರು ಪೊಲೀಸ್ ಇಲಾಖೆಯ 112 ಸಂಖ್ಯೆ ಹ್ಯಾಕ್‌ ಆಗಿದೆ. ಟೆಕ್ನಿಕಲ್ ತೊಂದರೆಯಿಂದಾಗಿ 112 ಸ್ಥಗಿತವಾಗಿದೆ. ಈ ಬಗ್ಗೆ ಟ್ವಿಟರ್ ಮೂಲಕ ಬೆಂಗಳೂರು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಟೆಕ್ನಿಕಲ್ ತೊಂದರೆಯಾಗಿ 112 ಗೆ ಕರೆಗಳು ಬರುತ್ತಿಲ್ಲ . ಹೀಗಾಗಿ ಪರ್ಯಾಯ ನಂಬರ್ ಬಳಸುವಂತೆ ಸೂಚನೆ ನೀಡಲಾಗಿದೆ. 112 ಬದಲಿಗೆ 080-22943000 ಬಳಸುವಂತೆ ಸೂಚನೆ ನೀಡಿದ್ದಾರೆ. ಯಾವುದೇ ಅಪರಾಧ ಸಂಬಂಧಿತ ವಿಚಾರಗಳಿಗೆ ಪರ್ಯಾಯ ನಂಬರ್ ಬಳಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

https://twitter.com/BlrCityPolice/status/1665286683192070144?ref_src=twsrc%5Etfw%7Ctwcamp%5Etweetembed%7Ctwterm%5E1665286683192070144%7Ctwgr%5E9961fa25ed98c0872f7f6fcd12fef7c65371bc59%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FBlrCityPolice%2Fstatus%2F1665286683192070144%3Fref_src%3Dtwsrc5Etfw

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!