ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ಹಂಚಿಕೆ ವಿವಾದ ಮಂಗಳವಾರ ಕರೆ ನೀಡಿರುವ ಬೆಂಗಳೂರು ಬಂದ್ ಸ್ವರೂಪ ನೋಡಿಕೊಂಡು ಸರ್ಕಾರಿ ಬಸ್ ಗಳ ಸಂಚಾರದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಬಂದ್ ದಿನದ ಬಸ್ ಸಂಚಾರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬಂದ್ ಕರೆಯ ಸ್ವರೂಪ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಹಿಂದೆಯೂ ಸಹ ರಾಜ್ಯದ ನೀರು, ಭಾಷೆಯ ಬಗ್ಗೆ ಸಮಸ್ಯೆಯ ಕುರಿತು ಬಂದ್ ಕರೆ ಕೊಟ್ಟಾಗ ಬಹುತೇಕರೆಲ್ಲಾ ಟ್ರಾನ್ಸಪೋರ್ಟ್ ಗಳು ಭಾಗವಹಿಸಿದ್ದವು. ಆದರೆ ಈ ಸಾರಿ ಏನು ಮಾಡುತ್ತಾರೋ ನೋಡೋಣ ಎಂದರು.
ಬಸ್ ಓಡಿಸೋ ಬಗ್ಗೆ ಈಗಲೇ ಏನು ಗೊತ್ತಾಗಲ್ಲ. ಬಂದ್ ಕುರಿತು ಅವರು ಯಾವ ಮಟ್ಟದಲ್ಲಿ ಮಾಡ್ತಾರೋ ನೋಡಬೇಕು, ಪ್ರತಿಭಟನೆ ಮಾಡ್ತಾರಾ, ಸಾಂಕೇತಿಕವಾಗಿ ಮಾಡ್ತಾರಾ ಅಥವಾ ಪೂರ್ತಿ ಬಸ್ ನಿಲ್ಲಸ್ತಾರಾ ಈ ಬಗ್ಗೆ ಯುನಿಯನ್ಸ್ ಇದ್ದಾರಲ್ಲ, ಅವರು ತೀರ್ಮಾನ ಮಾಡ್ತಾರೆ. ಜನರಲ್ ಆಗಿ ನಮ್ಮ ರಾಜ್ಯಕ್ಕೆ ಅನ್ಯಾಯ ಆದಂತಹ ಸಂದರ್ಭದಲ್ಲಿ ಬಹುತೇಕ ಎಲ್ಲರೂ ಸಹ ಭಾಗವಹಿಸ್ತಾರೆ. ನಾನು ನಮ್ಮ ರೋಡ್ ಟ್ರಾನ್ಸಪೋರ್ಟ್ ಕಾರ್ಪೋರೇಷನಗಳ ಮಾಹಿತಿ ಪಡೆದಿಲ್ಲ, ನಾನು ತಿಳಿದುಕೊಂಡು ಹೇಳುತ್ತೇನೆ ಎಂದರಲ್ಲದೆ, ನೆಲ, ಜಲದ ಬಗ್ಗೆ ಅನ್ಯಾಯ ಆದಾಗ ಹಿಂದೆಯೂ ಎಲ್ಲರೂ ಪ್ರತಿಭಟನೆ ಮಾಡಿದ್ದಾರೆ, ನಮ್ಮ ಅಸೋಸಿಯೇಷನ್ ನವರೆಲ್ಲಾ ಮಾಡಿದ್ದಾರೆ. ಈ ಸಾರಿ ಏನು ಮಾಡ್ತಾರೋ ನೋಡೋಣ ಎಂದರು.