ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ಬೇಕರಿ ಉದ್ಯಮದಲ್ಲಿ ಆಸಕ್ತಿ ಹೊಂದಿದ್ದೀರಾ? ಆದರೆ ಹೇಗೆ ಮಾಡುವುದೆಂದು ತಲೆಕೆಡಿಸಿಕೊಳ್ಳುತ್ತಿದ್ದೀರಾ? ಚಿಂತಿಸಬೇಡಿ ನಿಮಗೊಂದು ಉತ್ತಮ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಸ್ಕಿಲ್ ಕರ್ನಾಟಕದ ವತಿಯಿಂದ ಬೇಕರಿ ಉದ್ಯಮಕ್ಕೆ ಬೇಕಾಗುವ ಕೌಶಲಗಳನ್ನು ಉಚಿತವಾಗಿ ಕಲಿಸಿಕೊಡಲಾಗುತ್ತಿದೆ.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರಿನ ಬೇಕರಿ ತರಬೇತಿ ಘಟಕದ ಸಹಯೋಗದೊಂದಿಗೆ ಒಂದು ತಿಂಗಳ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನಿಷ್ಟ 10ನೇ ತರಗತಿ ಪಾಸಾಗಿರುವ 18 ರಿಂದ 35 ವರ್ಷದೊಳಗಿನ ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ https://skillconnect.kaushalkar.com/app/bakery. ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.
Self-reliant youths build a self-reliant nation! @Skill_Karnataka, in association with the bakery training unit, provides free 1-month training at Bengaluru for aspiring youths within 18-35yrs of age to become entrepreneurs in bakery sector. Details: https://t.co/J0VT7GaJSR. pic.twitter.com/Tr2sJde6UB
— Dr. Ashwathnarayan C. N. (@drashwathcn) April 23, 2022