ಭೂಕಂಪನ ಬೆನ್ನಲ್ಲೇ ಸಂಪಾಜೆಯಲ್ಲಿ ಕೇಳಿಸಿತು ವಿಚಿತ್ರ ಶಬ್ಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳವಾರ ಬೆಳಗ್ಗೆ ಭೂಕಂಪನವಾದ ಸಂಪಾಜೆ ಸುತ್ತಮುತ್ತಲ‌ ಪ್ರದೇಶದಲ್ಲಿ ಸಂಜೆ ವೇಳೆಗೆ ವಿಚಿತ್ರವಾದ ಶಬ್ಧ ಕೇಳಿಬಂದಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ.
ಸಂಪಾಜೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ 4.45ರ ಸುಮಾರಿಗೆ ಗುಡುಗಿನಂತಹ ವಿಚಿತ್ರ ಶಬ್ಧ ಕೇಳಿ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಬೆಳಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಸಂಪಾಜೆ ಸಮೀಪದ ಚೆಂಬು ಗ್ರಾಮದಲ್ಲಿ ಗೋಚರಿಸಿದ್ದು, ಇದರ ಬೆನ್ನಲ್ಲೇ ಸಂಜೆ ಕೇಳಿ ಬಂದಿರುವ ವಿಚಿತ್ರ ಶಬ್ಧ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!