ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ವೃತ ಆರಂಭ: ಪ್ರಧಾನಿ ಮೋದಿ ಶುಭ ಹಾರೈಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದೆಲ್ಲೆಡೆ ಶುಕ್ರವಾರದಿಂದ ಮುಸ್ಲಿಮರ (Muslim) ಪವಿತ್ರ ರಂಜಾನ್ (Ramadan) ಉಪವಾಸ ವೃತ ಆರಂಭವಾಗಿದೆ. ಈ ಪವಿತ್ರ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶುಭ ಹಾರೈಸಿದ್ದಾರೆ.

ಹಬ್ಬಕ್ಕೆ ಶುಭಾಶಯ ತಿಳಿಸುತ್ತಾ, ಈ ಪವಿತ್ರ ತಿಂಗಳು ನಮ್ಮ ಸಮಾಜದಲ್ಲಿ ಹೆಚ್ಚಿನ ಏಕತೆ ಹಾಗೂ ಸಾಮರಸ್ಯ ತರಲಿ. ಇದು ಬಡವರ ಸೇವೆಯ ಮಹತ್ವವನ್ನು ಪುನರುಚ್ಚರಿಸಲಿ ಎಂದಿದ್ದಾರೆ.

ಇಸ್ಲಾಂ ಸಮುದಾಯದ ಅತಿ ದೊಡ್ಡ ಹಬ್ಬವಾದ ರಂಜಾನ್ ತಿಂಗಳಲ್ಲಿ ಹೆಚ್ಚಿನವರು ಉಪವಾಸ (Fasting) ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸುರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!