ಯುಗಾದಿ ಹಬ್ಬದ ಸಂಭ್ರದ ಜೊತೆಯಲ್ಲಿಯೇ ಚಿನ್ನಾಭರಣ ಖರೀದಿದಾರರಿಗೆ ಶುಭಸುದ್ದಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಗಾದಿ ಹಬ್ಬದ ಸಂಭ್ರದ ಜೊತೆಯಲ್ಲಿಯೇ ಚಿನ್ನಾಭರಣ ಖರೀದಿದಾರರಿಗೆ ಶುಭಸುದ್ದಿ ಕೇಳಿಸಿದೆ.
ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದೆ.
ನಿನ್ನೆ ಭಾರೀ ಹೆಚ್ಚಳವಾಗಿದ್ದ ಬೆಳ್ಳಿಯ ಬೆಲೆ ಇಂದು ೮೦೦ ರೂ. ಇಳಿಕೆ ಕಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ೨೨ ಕ್ಯಾರೆಟ್ ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದ್ದು, ೧೦ ಗ್ರಾಂ ಚಿನ್ನಕ್ಕೆ ಇಂದು ೪೭,೯೫೦ ರೂಪಾಯಿ ಬೆಲೆ ದಾಖಲಾಗಿದೆ. ಮಂಗಳೂರು ಹಾಗೂ ಮೈಸೂರಿನಲ್ಲೂ ಕೂಡ ಇಷ್ಟೇ ಬೆಲೆ ನಿಗದಿಯಾಗಿದೆ.
ನಿನ್ನೆ ೨೨ ಕ್ಯಾರೆಟ್ ಚಿನ್ನದ ಬೆಲೆ ೪೮,೧೦೦ ರೂ. ಇತ್ತು. ಇಂದು ಈ ದರ ೪೭,೯೫೦ ರೂ. ಆಗಿದೆ. ಈ ನಡುವೆ ೨೪ ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ ೫೨,೪೭೦ ರೂ. ಇದ್ದ ಬೆಲೆ ಇಂದು ೫೨,೪೮೦ ರೂ. ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!