ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂತ್ರಪಿಂಡ ರೋಗಿಯ ಚಿಕಿತ್ಸೆಗಾಗಿ ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರು ತಮ್ಮ ಚಿನ್ನದ ಬಳೆಗಳಲ್ಲಿ ಒಂದನ್ನು ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತ್ರಿಶೂರ್ ಜಿಲ್ಲೆಯ ಇರಿಂಜಲಕುಡಾ ಪ್ರದೇಶದಲ್ಲಿ ಮೂತ್ರಪಿಂಡ ಕಸಿಗಾಗಿ ವೈದ್ಯಕೀಯ ಸಹಾಯ ಸಮಿತಿಯ ಸಭೆಯಲ್ಲಿ ಭಾಗವಹಿಸಲು ಸಚಿವರು ತೆರಳಿದ್ದರು . ಈ ವೇಳೆ ಮೂತ್ರಪಿಂಡ ಕಸಿ ಮಾಡಬೇಕಾದ 27 ವರ್ಷದ ವಿವೇಕ್ ಪ್ರಭಾಕರ್ ಅವರ ಕಂಡು ಮರುಗಿದ ಸಚಿವರು ತಮ್ಮ ಬಳೆಯನ್ನೇ ನೀಡಿದ್ದಾರೆ.
ತನ್ನ ಮಣಿಕಟ್ಟಿನಿಂದ ಚಿನ್ನದ ಬಳೆಯನ್ನು ಹೊರತೆಗೆದು ಅವನ ಚಿಕಿತ್ಸಾ ವೆಚ್ಚಕ್ಕಾಗಿ ಮೊದಲ ದೇಣಿಗೆಯಾಗಿ ನೀಡಿದಳು ಮತ್ತು ಇತರರಿಗೆ ಅನುಕರಿಸಲು ಮಾದರಿಯಾದರು.